ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಲಿ ಇರುವ ಗೃಹರಕ್ಷಕ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇನ್ನೂ ಅರ್ಜಿ ಪಡೆದುಕೊಳ್ಳಲು ಜನವರಿ 5 ಕೊನೆಯ ದಿನವಾಗಿದೆ.
1)19 ವರ್ಷ ವಯಸ್ಸಿನ ಅಭ್ಯರ್ಥಿಗಳು SSLC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
2) ಉತ್ತಮ ಆರೋಗ್ಯ ಮತ್ತು ದೇಹದಾರ್ಢ್ಯತೆ ಹೊಂದಿರಬೇಕು.
3) ಕಂಪ್ಯೂಟರ್ ಟೈಪಿಂಗ್ (ಕನ್ನಡ ಮತ್ತು ಇಂಗ್ಲೀಷ್) ಡ್ರೈವರ್ಸ್, ಅಡುಗೆ ಭಟ್ಟರು, ಕಾರ್ಪೆಂಟರ್, ಎಲೆಕ್ಟ್ರೀಷಿಯನ್, ಪೈಂಟರ್ ಮತ್ತು ಪ್ಲಂಬರ್ ಇತ್ಯಾದಿ ಕೌಶಲ್ಯಗಳ ತರಬೇತಿ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತರು ಅರ್ಜಿ ನಮೂನೆಗಳನ್ನು ಸಮಾದೇಷ್ಟರವರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಪಕ್ಕ, ರಾಜಾಜಿನಗರ, ಬೆಂಗಳೂರು-560010 ಇಲ್ಲಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಜನವರಿ 5ರವರೆಗೆ ಮಧ್ಯಾಹ್ನ 2.30ರಿಂದ 5ಗಂಟೆವರೆಗೆ ಉಚಿತವಾಗಿ ವಿತರಿಸಲಾಗುವುದು. ಅರ್ಜಿಯನ್ನು ಪಡೆಯುವ ಸಂದರ್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ ಟಿಸಿ ಅಥವಾ ಒರಿಜಿನಲ್ ಅಂಕಪಟ್ಟಿ ಹಾಜರುಪಡಿಸಿ ಅರ್ಜಿ ಪಡೆಯಬಹುದು ಎಂದು ಬೆಂಗಳೂರು ಉತ್ತರ ಜಿಲ್ಲಾ ಹೋಮ್ ಗಾರ್ಡ್ಸ್ ಕಮಾಂಡೆಂಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.