ಮೈಸೂರು:- ಬೆಂಗಳೂರು-ಮೈಸೂರು ಮಧ್ಯೆ ಸಂಚರಿಸುವ ಮೆಮು ರೈಲುಗಳು ಮದ್ದೂರು ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಲಿವೆ. ನೈಋತ್ಯ ರೈಲ್ವೆಯು ಎಲಿಯೂರು ರೈಲು ನಿಲ್ದಾಣದಲ್ಲಿ ಕಾಮಗಾರಿ ಕೈಗೊಂಡಿದ್ದರಿಂದ ಭಾಗಶಃ ರದ್ದಾಗಲಿವೆ. ಮಾರ್ಚ್ 3ರಂದು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಈ ಕೆಳಗಿನ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತವೆ.
ಫೈನಾನ್ಸ್ ಕಿರುಕುಳದ ಬಗ್ಗೆ ನನಗೆ ಹಿಂದೆಯೇ ಮಾಹಿತಿ ಇತ್ತು: ಲಕ್ಷ್ಮೀ ಹೆಬ್ಬಾಳ್ಳರ್!
ರೈಲು ಸಂಖ್ಯೆ 66551: ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಲ್ಲಿ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 66552: ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮೈಸೂರು ಬದಲು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಹೊರಡಲಿದೆ.
ರೈಲು ಸಂಖ್ಯೆ 06525: ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಲ್ಲಿ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 06526: ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಮೈಸೂರಿನ ಬದಲು ಮದ್ದೂರಿನಿಂದ ಹೊರಡಲಿದೆ.
ರೈಲು ಸಂಖ್ಯೆ 66553: ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಲ್ಲಿ ಕೊನೆಗೊಳ್ಳಲಿದೆ.
ರೈಲು ಸಂಖ್ಯೆ 66580: ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮೈಸೂರಿನ ಬದಲು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಹೊರಡಲಿದೆ