ಶಿರಡಿ ಸಾಯಿಬಾಬಾ ಮಂದಿರ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಇದರ ಬೆನ್ನಲ್ಲೇ ಶಿರಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರಸಾದದೂಟಕ್ಕೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಯಾರ್ಯಾರೋ ಶಿರಡಿ ದೇವಸ್ಥಾನದೊಳಗೆ ಆಗಮಿಸುತ್ತಾರೆ, ಊಟದ ಕೋಣೆಗೂ ಬರುತ್ತಾರೆ, ಹೀಗಾಗಿ ಅಪಾಯ ಕೂಡ ಹೆಚ್ಚಿದೆ. ಶಿರಡಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಆದ್ದರಿಂದ ಉಚಿತ ಊಟ ನಿಲ್ಲಿಸಬೇಕೆಂದು ಸುಜಯ್ ವಿಖೆ ಒತ್ತಾಯಿಸಿದ್ದರು. ಇದಕ್ಕಾಗಿ ಅವರನ್ನು ಟೀಕಿಸಲಾಯಿತು. ಆದರೆ ಈಗ ಶಿರಡಿ ಸಾಯಿಬಾಬಾ ಸಂಸ್ಥಾನವು ಉಚಿತ ಅನ್ನದಾನದ ಬಗ್ಗೆ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಸಾಯಿಬಾಬಾ ಅವರನ್ನು ನೋಡಲು ಬರುವ ಭಕ್ತರಿಗೆ ಟೋಕನ್ ವಿಧಾನದ ಮೂಲಕ ಉಚಿತ ಆಹಾರವನ್ನು ನೀಡಲಾಗುವುದು. ಸಾಯಿ ಪ್ರಸಾದಾಲಯದಲ್ಲಿ ಭಕ್ತರಿಗೆ ಈಗ ಉಚಿತ ಊಟಕ್ಕಾಗಿ ಕೂಪನ್ಗಳನ್ನು ನೀಡಲಾಗುವುದು. ಶಿರಡಿಯಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಅಪರಾಧ ಪ್ರಮಾಣ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಿರಡಿಯಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.