ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(state bank of india)ದ ಫಿಕ್ಸೆಡ್ ಡೆಪಾಸಿಟ್ (FD) ಸ್ಕೀಮ್ಗಳಲ್ಲಿ ಅಮೃತ್ ಕಳಶ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ (SBI Amrit Kalash FD Scheme) ಹೆಚ್ಚು ಜನರ ಗಮನ ಸೆಳೆದಿದೆ. 2023ರ ಏಪ್ರಿಲ್ 12ರಂದು ಎಸ್ಬಿಐ ಈ ಯೋಜನೆಯನ್ನು ಘೋಷಿಸಿತ್ತು. 2023ರ ಮಾರ್ಚ್ವರೆಗೂ ಈ ಸ್ಕೀಮ್ ಪಡೆಯಲು ಕೊನೆಯ ದಿನವಾಗಿತ್ತು. ಆ ಬಳಿಕ ಸತತವಾಗಿ ಇದರ ಗಡುವನ್ನು ವಿಸ್ತರಿಸುತ್ತಲೇ ಬರಲಾಗಿದೆ. ಇದೀಗ ಈ ವಿಶೇಷ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಮಾರ್ಚ್ 31ರವರೆಗೆ ಲಭ್ಯ ಇರುತ್ತದೆ.
ಎಸ್ಬಿಐ ಅಮೃತ್ ಕಳಶ್ ಯೋಜನೆಯಲ್ಲಿ ನಿಶ್ಚಿತ ಠೇವಣಿ 400 ದಿನದ ಅವಧಿಯದ್ದಾಗಿರುತ್ತದೆ. ಇದರ ಮೇಲಿನ ಬಡ್ಡಿ ಹಣವನ್ನು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ, ಅಥವಾ ಅರ್ಧವಾರ್ಷಿಕವಾಗಿ ಪಡೆಯಬಹುದು.
ಎಸ್ಬಿಐನ ಬೇರೆ ಠೇವಣಿಗಳಿಗೆ ಶೇ. 3.5ರಿಂದ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಬರುತ್ತದೆ. ಒಂದು ವರ್ಷದ ಠೇವಣಿಗೆ ಶೇ. 6.8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಎರಡು ವರ್ಷದಿಂದ ಮೂರು ವರ್ಷದವರೆಗಿನ ಠೇವಣಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಇದು ಎಸ್ಬಿಐನ ರೆಗ್ಯುಲರ್ ಡೆಪಾಸಿಟ್ ಯೋಜನೆಗಳಲ್ಲೇ ಗರಿಷ್ಠವೆನಿಸಿದೆ.
ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ವೀ ಕೇರ್ ಡೆಪಾಸಿಟ್ ಸ್ಕೀಮ್ನಲ್ಲಿ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಸರ್ವೋತ್ತಮ್ ಸ್ಕೀಮ್ನಲ್ಲಿ ಎರಡು ವರ್ಷದ ಠೇವಣಿಗೆ ಶೇ. 7.4ರಷ್ಟು ಬಡ್ಡಿ ಆಫರ್ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಶೇ. 7.9ರಷ್ಟು ಆದಾಯ ಬರುತ್ತದೆ.
ಎಸ್ಬಿಐನ ರೆಗ್ಯುಲರ್ ಡೆಪಾಸಿಟ್ಗಳಿಗೆ ಇರುವ ದರ (ಸಾಮಾನ್ಯ ಗ್ರಾಹಕರಿಗೆ)
- 45 ದಿನಗಳವರೆಗಿನ ಠೇವಣಿ: ಶೇ. 3.5 ಬಡ್ಡಿ
- 46 ದಿನದಿಂದ 179 ದಿನಗಳವರೆಗೆ: ಶೇ. 4.75
- 180 ದಿನದಿಂದ 210 ದಿನದವರೆಗೆ: ಶೇ. 5.75
- 211 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ: ಶೇ. 6
- ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: ಶೇ. 6.8
- ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಶೇ. 7
- ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ: ಶೇ. 6.75
- ಐದು ವರ್ಷದಿಂದ 10 ವರ್ಷದವರೆಗೆ: ಶೇ. 6.5 ಬಡ್ಡಿ
400 ದಿನಗಳ ಠೇವಣಿಯು ಅಮೃತ್ ಕಳಶ್ ಪ್ಲಾನ್ ಅಡಿಯಲ್ಲಿ ಬರುತ್ತದೆ. ಇದಕ್ಕೆ ಶೇ. 7.1ರಷ್ಟು ಬಡ್ಡಿ ಇದೆ. ಈ ಎಲ್ಲಾ ವಿಶೇಷ ಮತ್ತು ರೆಗ್ಯುಲರ್ ಡೆಪಾಸಿಟ್ ಪ್ಲಾನ್ಗಳಲ್ಲಿ ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚಿಗೆ ಬಡ್ಡಿ ಸಿಗುತ್ತದೆ.
ಅಮೃತ್ ಕಳಶ್ ಸ್ಕೀಮ್ನಲ್ಲಿ ಬಡ್ಡಿ ಹಣ ಪಾವತಿ, ಟಿಡಿಎಸ್ ಕಡಿತ ಇತ್ಯಾದಿ ವಿವರ
ಎಸ್ಬಿಐನ 400 ದಿನಗಳ ಅಮೃತ್ ಕಳಶ್ ಸ್ಕೀಮ್ನಲ್ಲಿ ಗ್ರಾಹಕರಿಗೆ ಸಿಗುವ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಇನ್ನು, ಬಡ್ಡಿ ಹಣವನ್ನು ಠೇವಣಿಯಲ್ಲೇ ಮುಂದುವರಿಸುವ ಬದಲು ಗ್ರಾಹಕ ಖಾತೆಗೆ ವರ್ಗಾಯಿಸಲಾಗುತ್ತದೆ. ಮಾಸಿಕವಾಗಿಯಾದರೂ ಬಡ್ಡಿಹಣ ಪಡೆಯಬಹುದು. ಅಥವಾ ಮೂರು ತಿಂಗಳಿಗೊಮ್ಮೆಯೋ ಅಥವಾ ಅರ್ಧ ವರ್ಷಕ್ಕೆ ಒಮ್ಮೆಯೋ ಬಡ್ಡಿಹಣವನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಇರುತ್ತದೆ. ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತವಾದರೂ ಆ ಹಣವನ್ನು ಐಟಿ ರಿಟರ್ನ್ ಸಲ್ಲಿಸುವ ವೇಳೆ ಡಿಡಕ್ಷನ್ ಕ್ಲೈಮ್ ಮಾಡಬಹುದು.