ಪ್ರಸ್ತುತ ಜನರು ಆನ್ಲೈನ್ ಸೇವೆಗಳತ್ತ ಹೆಚ್ಚಾಗಿ ವಾಲುತ್ತಿದ್ದು, ಆ ಪೈಕಿ ಬಳಕೆದಾರರ ಸ್ಮಾರ್ಟ್ಫೋನಿನಲ್ಲಿ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಮ್ ಆ್ಯಪ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಟೀ ಸ್ಟಾಲ್, ತರಕಾರಿ ಅಂಗಡಿ, ಕಿರಾಣಿ ಸ್ಟೋರ್, ಸೂಪರ್ ಮಾರ್ಕೆಟ್ ಸೇರಿದಂತೆ ಶೋ ರೂಮ್/ಮಾಲ್ಗಳಲ್ಲಿಯೂ ಗೂಗಲ್ ಪೇ, ಫೋನ್ ಪೇ UPI ಆ್ಯಪ್ಗಳನ್ನು ಬಳಕೆ ಮಾಡಿ ಬಿಲ್ ಪಾವತಿಸುವುದು ಸಾಮಾನ್ಯವಾಗಿದೆ. ಈ ಆ್ಯಪ್ಗಳ ಬಳಕೆ ಸರಳ ಮತ್ತು ಸುರಕ್ಷಿತವು ಆಗಿವೆ. ನೀವು ಫೋನ್ ಪೇ ಬಳಕೆದಾರರಾಗಿದ್ದರೆ ಈ ಸುದ್ದಿ ನೋಡಿ.
ಹೌದು, ನೀವು ದಿನನಿತ್ಯ ಗ್ಯಾಸ್ ಸಿಲಿಂಡರ್ ಬಳಸುತ್ತೀರ ಅಲ್ವಾ? ಒಂದು ಸಂತೋಷದ ಸುದ್ದಿ ಇಲ್ಲಿದೆ. ನಿಮ್ಮೆಲ್ಲರಿಗೂ ಫೋನ್ಪೇ ಒಂದು ಸೂಪರ್ ಆಫರ್ ತಂದಿದೆ. ಹೌದು, ಫೋನ್ಪೇ ಮೂಲಕ ಗ್ಯಾಸ್ ಬುಕ್ ಮಾಡಿದ್ರೆ ನಿಮಗೆ ಉಚಿತವಾಗಿ ಸಿಲಿಂಡರ್ ಸಿಗುವ ಚಾನ್ಸ್ ಇದೆ. ಇದನ್ನೆಲ್ಲ ಹೇಗೆ ಅಂತ ತಿಳ್ಕೊಳ್ಳೋಣ ಬನ್ನಿ.
ನಮ್ಮ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಖಾಲಿ ಆದಾಗಲೆಲ್ಲಾ ನಾವು ಅದನ್ನ ಮತ್ತೆ ಬುಕ್ ಮಾಡ್ತೀವಿ. ಇನ್ಮೇಲೆ ಫೋನ್ಪೇ ಮೂಲಕನೆ ಗ್ಯಾಸ್ ಬುಕ್ ಮಾಡಿ. ಏಕೆಂದರೆ, ಫೋನ್ಪೇ ಮೂಲಕ ಬುಕ್ ಮಾಡೋ ಪ್ರತಿ ಗಂಟೆಗೂ ಒಬ್ಬ ಅದೃಷ್ಟವಂತರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಿಗುತ್ತೆ.
ಬೆಳಿಗ್ಗೆ 10 ರಿಂದ ಸಾಯಂಕಾಲ 5 ರ ವರೆಗೆ ಪ್ರತಿ ಗಂಟೆಗೂ ಒಬ್ಬರಿಗೆ ಈ ಸುವರ್ಣಾವಕಾಶ. ಯಾರೆಲ್ಲಾ ಗೆದ್ದಿದ್ದಾರೆ ಅಂತ ಫೋನ್ಪೇನಲ್ಲೇ ನೋಡಬಹುದು. ಇಷ್ಟೇ ಅಲ್ಲ, ಸಿಲಿಂಡರ್ ಬುಕ್ ಮಾಡೋ ಎಲ್ಲರಿಗೂ 100% ಕ್ಯಾಶ್ಬ್ಯಾಕ್ ಸಿಗುವ ಅವಕಾಶನೂ ಇದೆ
ಯಾರಿಗೆ ಯಾವಾಗ ಈ ಅದೃಷ್ಟ ಅಂತ ಯಾರಿಗೆ ಗೊತ್ತು? ನೀವು ಸಿಲಿಂಡರ್ ಬುಕ್ ಮಾಡುವಾಗ ಫೋನ್ಪೇ ಬಳಸಿದರೆ, ನೀವು ಪಾವತಿಸಿದ್ದೆಲ್ಲವೂ ನಿಮಗೆ ವಾಪಸ್ಸು ಸಿಗಬಹುದು.
ಈ ಸೂಪರ್ ಆಫರ್ 31 ಡಿಸೆಂಬರ್ 2025 ರ ವರೆಗೆ ಮಾತ್ರ. ಬೆಳಿಗ್ಗೆ 10 ರಿಂದ ಸಾಯಂಕಾಲ 5 ರ ಒಳಗೆ ಫೋನ್ಪೇ ಮೂಲಕ ಗ್ಯಾಸ್ ಬುಕ್ ಮಾಡುವವರಿಗೆ ಮಾತ್ರ ಈ ಕೊಡುಗೆ ಅನ್ವಯಿಸುತ್ತದೆ.
UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನಿಮ್ಮ ಫೋನ್ಪೇ ವ್ಯಾಲೆಟ್ ಬಳಸಿ ನೀವು ಬೇಕಾದ ರೀತಿಯಲ್ಲಿ ಪಾವತಿ ಮಾಡಬಹುದು. ಒಬ್ಬರು ಎಷ್ಟು ಬಾರಿ ಬೇಕಾದ್ರೂ ಗ್ಯಾಸ್ ಬುಕ್ ಮಾಡಬಹುದು. ಆದರೆ 100% ಕ್ಯಾಶ್ಬ್ಯಾಕ್ ಮಾತ್ರ ಒಂದು ಬಾರಿ ಸಿಗುತ್ತದೆ. ಅಂದರೆ ನೀವು 5-6 ಬಾರಿ ಗ್ಯಾಸ್ ಬುಕ್ ಮಾಡಿ ಒಮ್ಮೆ ಕ್ಯಾಶ್ಬ್ಯಾಕ್ ಪಡೆದರೆ ಮತ್ತೆ ನಿಮಗೆ ಈ ಕೊಡುಗೆ ಅನ್ವಯಿಸುವುದಿಲ್ಲ.
ಕ್ಯಾಶ್ಬ್ಯಾಕ್ ಹಣ ನಿಮ್ಮ ಫೋನ್ಪೇ ವ್ಯಾಲೆಟ್ ಗೆ ಗಿಫ್ಟ್ ಕಾರ್ಡ್ ರೂಪದಲ್ಲಿ ಬರುತ್ತದೆ. ಈ ಹಣವನ್ನು ನೀವು ರೀಚಾರ್ಜ್, ಬಿಲ್ ಪಾವತಿ ಇತ್ಯಾದಿಗಳಿಗೆ ಬಳಸಬಹುದು. ಫೋನ್ಪೇ ಈ ಆಫರ್ ಅನ್ನು ಯಾವಾಗ ಬೇಕಾದರೂ ಹಿಂಪಡೆಯುವ ಹಕ್ಕನ್ನು ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ.