ಸಾಮಾನ್ಯವಾಗಿ ಮಹಿಳೆಯರು ಯಾವುದೇ ಆಹಾರವಾಗಲಿ ಫ್ರಿಡ್ಜ್ನಲ್ಲಿಟ್ಟರೆ ಬೇಗನೆ ಹಾಳಾಗುವುದಿಲ್ಲ ಎಂದು ಹೆಚ್ಚು ಇಲ್ಲೇ ಇಡುತ್ತಾರೆ. ಟೊಮೆಟೊ, ಈರುಳ್ಳಿ, ಬಾಳೆಹಣ್ಣು ಎಲ್ಲವನ್ನೂ ಫ್ರಿಡ್ಜ್ನಲ್ಲಿಡುವ ಅಭ್ಯಾಸ ಇರುತ್ತದೆ.
ಆದರೆ ಕೆಲವೊಂದು ಆಹಾರಗಳನ್ನು ಫ್ರಿಡ್ಜ್ನಲ್ಲಿಟ್ಟರೆ ಅದು ವಿಶವಾಗುತ್ತದೆ, ಆದ್ದರಿಂದ ಅಂಥ ಆಹಾರಗಳನ್ನು ಫ್ರಿಡ್ಜ್ನಲ್ಲಿ ಇಡದಿದ್ದರೆ ಒಳ್ಳೆಯದು, ಇನ್ನು ಕೆಲವೊಂದು ಆಹಾರಗಳನ್ನು ಇಟ್ಟರೆ ಅವುಗಳನ್ನ 24 ಗಂಟೆಗಳಿಗೊಮ್ಮೆ ಸೇವಿಸಬೇಕು. ಯಾವ ಆಹಶರಗಳು ಫ್ರಿಡ್ಜ್ನಲ್ಲಿಟ್ಟರೆ ಅದು ವಿಷಕಾರಿ ಇಲ್ಲಿದೆ ಮಾಹಿತಿ:-
ಬೆಳ್ಳುಳ್ಳಿ
ಈರುಳ್ಳಿ
ಶುಂಠಿ
ಅನ್ನ
ಇವುಗಳನ್ನು ಫ್ರಿಡ್ಜ್ ನಲ್ಲಿಟ್ಟು ಬಳಸಬೇಡಿ.
ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್ನಲ್ಲಿಡುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ, ಆದರೆ ಅಂಥ ಆಹಾರಗಳನ್ನು ಫ್ರಿಡ್ಜ್ನಲ್ಲಿ ಇಡಲೇಬೇಡಿ ಅಥವಾ ಫ್ರಿಡ್ಜ್ನಲ್ಲಿ ಸ್ಟೋರ್ ಮಾಡಿಟ್ಟ ಸುಲಿದ ಬೆಳ್ಳುಳ್ಳಿ ಖರೀದಿಸಲೇಬೇಡಿ. ಏಕೆಂದರೆ ಇಂಥ ಬೆಳ್ಳುಳ್ಳಿ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ. ಆದ್ದರಿಂದ ಯಾವಾಗಲೂ ಸಿಪ್ಪೆ ಸಹಿತ ಬೆಳ್ಳುಳ್ಳಿ ಖರೀದಿಸಿ ಅಡುಗೆ ಮಾಡುವಾಗ ಅಷ್ಟೇ ಬೆಳ್ಳುಳ್ಳಿಯ ಸುಪ್ಪೆ ಸುಲಿದು ಬಳಸಿ.
ಈರುಳ್ಳಿಯನ್ನು ಕೂಡ ಫ್ರಿಡ್ಜ್ನಲ್ಲಿ ಇಡಲೇಬಾರದು. ಅಲ್ಲದೆ ಈರುಳ್ಳಿಯನ್ನು ಅರ್ಧ ಕತ್ತರಿಸಿ ಫ್ರಿಡ್ಜ್ನಲ್ಲಿ ಇಡಬೇಡಿ, ಏಕೆಂದರೆ ಇಂಥ ಈರುಳ್ಳಿ ಸೇವಿಸಿದರೆ ಫುಡ್ ಫಾಯಿಸನ್ ಉಂಟಾಗುವುದು, ಆದ್ದರಿಂದ ಇಂಥ ಆಹಾರಗಳನ್ನು ಬಳಸಲೇಬೇಡಿ. ಈರುಳ್ಳಿಯನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟರೆ ಅದರಲ್ಲಿ ಅನಾರೋಗ್ಯಕರ ಬ್ಯಾಕ್ಟಿರಿಯಾ ಸೇರುವುದರಿಂದ ಈ ರೀತಿ ಮಾಡಲೇಬೇಡಿ.
ಶುಂಠಿ: ಇದನ್ನು ಕೂಡ ನಾವು ಫ್ರಿಡ್ಜ್ನಲ್ಲಿ ಇಡುತ್ತೇವೆ, ಮನೆಮದ್ದಾಗಿ, ಅಡುಗೆಯಲ್ಲಿ, ಶುಂಠಿ ಟೀ ಮಾಡುವಾಗ ಪ್ರತಿನಿತ್ಯ ನಾವು ಶುಂಠಿಯನ್ನು ಬಳಸುತ್ತೇವೆ, ಇದನ್ನು ನಾವು ಫ್ರಿಡ್ಜ್ನಲ್ಲಿಟ್ಟು ಬಳಸುತ್ತೇವೆ. ಆದರೆ ಇದನ್ನು ಫ್ರಿಡ್ಜ್ನಲ್ಲಿಟ್ಟು ಬಳಸಲೇಬೇಡಿ.
ಅನ್ನ ಉಳಿದಿದೆ ಎಂದು ಫ್ರಿಡ್ಜ್ನಲ್ಲಿಟ್ಟು ನಾಳೆ ಪುಳಿಯೊಗರೆ, ಚಿತ್ರಾನ್ನ ಅಂತ ಮಾಡೋಣ ಅಂತ ಫ್ರಿಡ್ಜ್ನಲ್ಲಿ ಇಡಬೇಡಿ, ಅನ್ನವನ್ನು ಫ್ರಿಡ್ಜ್ನಲ್ಲಿಟ್ಟು ಬಳಸುವುದರಿಂದ ಆ ಆಹಾರದಲ್ಲಿ ಅನಾರೋಗ್ಯಕರ ಬ್ಯಾಕ್ಟಿರಿಯಾ ತಗುಲಿ ಆರೋಗ್ಯ ಹಾಳಾಗಬಹುದು