ಬೆಂಗಳೂರು: ಇಂದು ಬಂಗಾರ ಆಚಾರ ಹಾಗೂ ಆಡಂಭರವಾಗಿ ಮಾನ್ಯತೆ ಪಡೆದುಕೊಂಡಿದೆ. ಅಲ್ಪ ಸ್ವಲ್ಪ ಹಣ ಸಿಕ್ಕಿದರೂ ಇದನ್ನು ಬಂಗಾರ ಮಾಡಿಸುವ ಎಂದು ಯೋಚಿಸುವ ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಂತಹ ದೇಶದಲ್ಲಿ ಬಂಗಾರದ ಬೆಲೆ ಏರಿಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಮ್ಮೆ ಏರಿಕೆ ಒಮ್ಮೆ ಇಳಿಕೆ ಹೀಗೆ ಬೆಳ್ಳಿ ಬಂಗಾರ ಹಾವು ಏಣಿ ಆಟವಾಡುತ್ತಿದೆ.
ಇದೀಗ ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 60 ರೂ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ 65 ರೂ. ದುಬಾರಿಯಾಗಿದೆ. ಈ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 7,100 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ 7,745 ರೂ.ಗೆ ತಲುಪಿದೆ.
22 ಕ್ಯಾರಟ್ ಚಿನ್ನದ ದರಗಳ ವಿವರ
22 ಕ್ಯಾರಟ್ನ 8 ಗ್ರಾಂ ಚಿನ್ನ 56,800 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,000 ರೂ. ಮತ್ತು 100 ಗ್ರಾಂಗೆ 7,10,000 ರೂ. ಪಾವತಿಸಬೇಕಾಗುತ್ತದೆ.
24 ಕ್ಯಾರಟ್ ಚಿನ್ನದ ದರಗಳ ವಿವರ
24 ಕ್ಯಾರಟ್ನ 8 ಗ್ರಾಂ ಚಿನ್ನ 61,960 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 77,450 ರೂ. ಮತ್ತು 100 ಗ್ರಾಂಗೆ 7,74,500 ರೂ. ಪಾವತಿಸಬೇಕಾಗುತ್ತದೆ.
ಬೆಳ್ಳಿ ಬೆಲೆ
ಇತ್ತ ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಬೆಳ್ಳಿ 1 ಗ್ರಾಂನ ಬೆಲೆ 91.50 ರೂ., 8 ಗ್ರಾಂಗೆ 732 ರೂ., 10 ಗ್ರಾಂಗೆ 915 ರೂ. ಮತ್ತು 1 ಕೆಜಿಗೆ 91,500 ರೂ. ಪಾವತಿಸಬೇಕಾಗುತ್ತದೆ.