2025ರಲ್ಲಿ ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಸರಕುಗಳ ಬೆಲೆಗಳು 2025ರಲ್ಲಿ ಶೇಕಡಾ 5.1 ರಷ್ಟು ಮತ್ತು 2026ರಲ್ಲಿ ಶೇಕಡಾ 1.7 ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ
ಬೆಲೆಬಾಳುವ ಲೋಹಗಳ ಪೈಕಿ ಚಿನ್ನದ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದ್ದು, ಬೆಳ್ಳಿ ಬೆಲೆ ಏರಿಕೆಯಾಗಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಲೋಹ, ಖನಿಜಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕಬ್ಬಿಣದ ಅದಿರಿನ ಜತೆಗೆ ತಾಮ್ರದ ಬೆಲೆಯೂ ಇಳಿಕೆಯಾಗಲಿದೆ.
ಭಾರತದಲ್ಲಿ ಚಿನ್ನದ ಆಮದು ಹೆಚ್ಚಳಕ್ಕೆ ಕಾರಣಗಳು..!
ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ, ವಿದೇಶಿ ವಿನಿಮಯದಲ್ಲಿ ಏರಿಳಿತ
ಹೊಸ ಹೊಸ ಉದಯೋನ್ಮುಖ ಮಾರುಕಟ್ಟೆಗಳ ಉದಯ
ಕೇಂದ್ರೀಯ ಬ್ಯಾಂಕ್ಗಳಿಂದ ಚಿನ್ನದ ಆಮದು ಹೆಚ್ಚುತ್ತಿರೋದು
ಜಾಗತಿಕ ಬೆಲೆಗಳು, ಹಬ್ಬ, ಮದುವೆ ಸಮಾರಂಭಗಳಿಗೆ ಹೆಚ್ಚು ಬೇಡಿಕೆ
ಸುರಕ್ಷಿತ ಸ್ವತ್ತು ಆಗಿ ಚಿನ್ನಾಭರಣ ಬಳಕೆ ಮಾಡಲಾಗುತ್ತಿದೆ
ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶ ಭಾರತ