ಬೆಂಗಳೂರು:- ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟಿರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನಿಂದ KSRTCಗೆ ಹೊಸ ಬಸ್ಗಳು ಸೇರ್ಪಡೆಗೊಳ್ಳಲಿದ್ದು, ಹೀಗಾಗಿ KSRTC ಸಿಹಿ ಸುದ್ದಿ ಕೊಟ್ಟಿದೆ.
ಬೆಂಗಳೂರಿನಲ್ಲಿ ಪತ್ತೆಯಾಯ್ತು ಗೋವಾ ಮದ್ಯ: 5 ಲಕ್ಷ ಮೌಲ್ಯದ ಎಣ್ಣೆ ಜೊತೆಗೆ ಓರ್ವ ಅರೆಸ್ಟ್!
ದೀಪಾವಳಿಗೆ ರಜೆ ಇದ್ದು, ಬಹುತೇಕರು ಬೆಂಗಳೂರು ಬಿಟ್ಟು ಊರಿಗೆ ಹೊರಟಿದ್ದಾರೆ. ಹೀಗಾಗಿ ಬಸ್ ಸಿಗದೆ ಕೆಲವರು ಕಂಗೆಟ್ಟಿದ್ದರು. ಆದರೆ KSRTC ಕಡೆಯಿಂದ ಅಂತವರಿಗಾಗಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಇಂದು ರಸ್ತೆಗಿಳಿಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಬಸ್ಗಳಿಗೆ ಚಾಲನೆ ಕೊಡಲಿದ್ದಾರೆ