ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅದಾಗಲೇ ಸಿಲಿಕಾನ್ ಸಿಟಿಯನ್ನು ನಶೆಯಲ್ಲಿ ತೇಲಿಸೋಕ್ಕೆ ಗ್ಯಾಂಗ್ ರೆಡಿಯಾಗಿತ್ತು. ಆದ್ರೆ ಪಕ್ಕಾ ಮಾಹಿತಿ ಕಲೆ ಹಾಕಿದ್ದ ಸಿಸಿಬಿ .ಹೊಸ ವರ್ಷಕ್ಕೆ ಡ್ರಗ್ಸ್ ಸರಬರಾಜಗೆ ಬ್ರೇಕ್ ಹಾಕಿದೆ. ಸಿಸಿಬಿ ಸಿಕ್ರೇಟ್ ಅಪರೇಷನ್ ಡಿಟೇಲ್ಸ್ ಇಲ್ಲಿದೆ ನೋಡಿ.
ಪ್ರತಿವರ್ಷದಂತೆ ಈ ವರ್ಷವು ನಗರದಲ್ಲಿ ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರ ಮೇಲೆ ಸಿಸಿಬಿ ನಿಗಾ ಇಟ್ಟಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ತಂಡ ನಗರದಲ್ಲಿ ಹೊಸ ವರ್ಷಕ್ಕೆ ರೆಸ್ಟೋರೆಂಟ್ ಹೊಟೇಲ್ ಪಾರ್ಟಿ, ರೇವಾ ಪಾರ್ಟಿಗಳಿಗೆ ಸರಬರಾಜು ಮಾಡೋದಿಕ್ಕೆ ಇಟ್ಟಿದ್ದ 21 ಕೋಟಿ ಮೌಲ್ಯದ ಎಮ್ ಡಿ ಎಮ್ ಎ ಕಿಸ್ಟ್ರಲ್, ಹಾಗು 500 ಗ್ರಾಂ ಕೋಕೇನ್ ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಫ್ರಿಕಾ ಪ್ರಜೆ ಲಿಯೋನಾರ್ಡ್ ಒಕ್ವಿಡಿಲಿ ಎಂಬಾತ ಡ್ರಗ್ಸ್ ಸ್ಟಾಕ್ ಮಾಡಿಟ್ಟಿಕೊಂಡಿದ್ದ. ಸಿಸಿಬಿ ದಾಳಿ ನಡೆಸಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬ್ಯೂಸಿನೆಸ್ ವೀಸಾದಲ್ಲಿ ನಗರಕ್ಕೆ ಬಂದಿದ್ದ ಆರೋಪಿ ಡ್ರಗ್ ಬ್ಯೂಸಿನೆಸ್ ಗೆ ಕೈ ಹಾಕಿದ್ದ. ಆಫ್ರಿಕನ್ ಪ್ರಜೆಗಳೇ ಹೆಚ್ಚಿನವರು ಹೆಣ್ಣೂರು ,ರಾಮಮೂರ್ತಿನಗರ ಭಾಗದಲ್ಲಿ ನೆಲಸಿ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದಾರೆ. ಆರೋಪಿಯು ಮುಂಬೈ ಹಾಗು ದೆಹಲಿಯಿಂದ ವಿದೇಶಿ ಸ್ನೇಹಿತರಿಂದ ಯಾರಿಗೂ ಅನುಮಾನ ಬಾರದ ರೀತಿ ವಿಭಿನ್ನ ರೀತಿಯಲ್ಲಿ ಡ್ರಗ್ಸ್ ತರಿಸುತ್ತಿದ್ದ.ಹೌದು ಈತ ಡ್ರಗ್ಸ್ ಅನ್ನು ಚೂಡಿದಾರ , ಸೀರೆ , ಬೆಡ್ ಶೀಟ್ ಕವರ್ , ಸೋಪ್ ಬಾಕ್ಸ್ ,ಚಾಕ್ಲೇಟ್ ಬಿಸ್ಕೇಟ್ ಬಾಕ್ಸ್ ಗಳಲ್ಲಿ ಡ್ರಗ್ಸ್ ಗಳನ್ನ ತರಿಸಿಕೊಳ್ತಿದ್ದ .
ಆರೋಪಿ ಈತ ಕಾಲೇಜು ವಿದ್ಯಾರ್ಥಿಗಳು , ಐಟಿ ಬಿಟಿ ಅವರಲ್ಲದೆ ನಗರದ ಹೊರವಲಯದಲ್ಲಿ ನಡೆಯುವ ರೇವಾ ಪಾರ್ಟಿ ಗಳಿಗೂ ಸಪ್ಲೈ ಮಾಡಲು ಸಿದ್ದತೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ಹೊಸ ವರ್ಷಾಚರಣೆ ವೇಳೆ ಒಂದಕ್ಕೆ ಐದು ಪಟ್ಟು ಮಾರಾಟವಾಗುತ್ತದೆ ಹೀಗಾಗಿ ಬೃಹತ್ ಮೊತ್ತದ ಡ್ರಗ್ಸ್ ಗಳನ್ನ ಶೇಖರಣೆ ಮಾಡಿದ್ದ ಎನ್ನಲಾಗಿದೆ.
ಇನ್ನು ಇದು ಬೆಂಗಳೂರು ಪೊಲೀಸರು ಇತ್ತೀಚಿನ ಮಟ್ಟಿಗೆ ನೆಡೆಸಿರೋ ಬೃಹತ್ ಬೇಟೆ ಇದಾಗಿದೆ . ಸದ್ಯ ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಿಸಿಬಿ ಪೊಲೀಸರು ಆರೋಪಿಯನ್ನ ಇನ್ನೂ ಹೆಚ್ಚಿನ ವಿಚಾರಣೆ ನೆಡೆಸುತ್ತಿದ್ದಾರೆ.