ಚಿಕ್ಕೋಡಿ:- ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜರುಗಿದೆ.
ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿರುವ ಅಡುಗೆ ಸಿಬ್ಬಂದಿಗೆ ಶೌಚಾಲಯ ಸ್ವಚ್ಛ ಮಾಡುವಂತೆ ಅಡುಗೆ ಮಾಡುವ ಮಹಿಳೆಗೆ ಶಿಕ್ಷಕಿ ಹೇಳಿದ್ದಾರೆ. ಈ ವಿಚಾರವನ್ನ ತನ್ನ ಗಂಡನಿಗೆ ಅಡುಗೆ ಸಿಬ್ಬಂದಿ ಸಾವಿತ್ರಿ ಕರ್ಲಟ್ಟಿ ಹೋಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡು ಅಂಗನವಾಡಿಗೆ ಆಗಮಿಸಿದ್ದ ಆರೋಪಿ ಸಿದ್ರಾಯಿ ಕರ್ಲಟ್ಟಿ, ತನ್ನ ಹೆಂಡತಿಗೆ ಶೌಚಾಲಯ ಕ್ಲಿನ್ ಮಾಡಲು ಹಚ್ಚುತ್ತಿಯಾ ಅಂತಾ ಅವಾಚ್ಯವಾಗಿ ನಿಂದಿಸಿದ್ದಾರೆ.
ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಶಿಕ್ಷಕಿ ಸೀರೆ ಎಳೆದು ಮಾನಭಂಗ ಪಡಿಸಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಇನ್ನು ಶಿಕ್ಷಕಿ ಬ್ರೈನ್ ಟ್ಯೂಮರ್ದಿಂದ ಬಳಲುತ್ತಿದ್ದು, ಮಾನಸಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದ್ದಾರೆ.