ಬೆಳಗಾವಿ: ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುದ್ಧಿಮಾಂದ್ಯೆ ಯುವತಿ ಮೇಲೆ ವ್ಯಕ್ತಿಯೊರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜರುಗಿದೆ.
ಯುವತಿ ಪೋಷಕರು ಇಲ್ಲದ ಸಮಯ ನೋಡಿ ಅತ್ಯಾಚಾರ ಎಸಗಲು ಆರೋಪಿ ಯತ್ನಿಸಿದ್ದಾನೆ. ಈ ವೇಳೆ ಯುವತಿ ಶಬ್ಧ ಮಾಡಿದಾಗ ತಕ್ಷಣವೇ ಮನೆ ಒಳಗೆ ಹೋಗಿರುವ ಯುವತಿಯ ಚಿಕ್ಕಪ್ಪ, ವ್ಯಕ್ತಿಯನ್ನ ಹಿಡಿದು ಥಳಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿ ಬಿದ್ದಂತೆ ನಾಟಕವಾಡಿರುವ ಆರೋಪಿ, ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ.
ತಕ್ಷಣವೇ ಯುವತಿ ಜೊತೆಗೆ ಕಾಕತಿ ಠಾಣೆಗೆ ಆಗಮಿಸಿದ ಪೋಷಕರು, ಸಂಬಂಧಿಗಳು ದೂರು ನೀಡಿದ್ದಾರೆ. ಘಟನೆ ಬಳಿಕ ಅಲರ್ಟ್ ಆದ ಬೆಳಗಾವಿ ಗ್ರಾಮೀಣ ವಿಭಾಗದ ಪೊಲೀಸರು, ಶೋಧ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.