ರಾಯಚೂರು:- ಮಗಳಂತಿರುವ ಸೊಸೆ ಮೇಲೆ ರೇಪ್ ಗೆ ಮಾವ ಯತ್ನಿಸಿದ್ದು, ಬಳಿಕ ಆಕೆ ಸ್ಪಂದಿಸದ ಹಿನ್ನೆಲೆ ಮಗನ ಹೆಂಡ್ತಿಯನ್ನೇ ಕೊಲೆಗೈದ ಘಟನೆ ಜರುಗಿದೆ.
ರಾಯಚೂರಿನ ಜುಲಮಗೇರಾ ಗ್ರಾಮದಲ್ಲಿ ಘಟನೆ ಜರುಗಿದೆ. ಮೃತ ಮಹಿಳೆಯನ್ನು 27 ವರ್ಷದ ದುಳ್ಳಮ್ಮ ಎಂದು ಗುರುತಿಸಲಾಗಿದೆ.
ಇದಕ್ಕೂ ಮುಂದೆ 2-3 ಬಾರಿ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಗ್ರಾಮದ ಹಿರಿಯರು, ಕುಟುಂಬಸ್ಥರು ಆರೋಪಿ ರಾಮಲಿಂಗಯ್ಯಗೆ ಬೈದು ಬುದ್ಧಿ ಹೇಳಿದ್ದರು. ಆದರೂ ಈ ಬಾರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಸೊಸೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ. ಈ ವೇಳೆ ಸೊಸೆ ನಿರಾಕರಿಸಿದ್ದು, ಸಲಾಕೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಸದ್ಯ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.