ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಕೇಸ್ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ ಅವರು,ಯಾರೇ ತಪ್ಪು ಮಾಡಿದ್ರು ಕೂಡ ಅವರ ವಿರುದ್ಧ ಕಠಿಣ ಕ್ರಮ ತಗೊತ್ತೇವೆ ಅದರ ಬಗ್ಗೆ ಒಂದು ಸಭೆ ಮಾಡಿ ಸೂಕ್ತ ಕ್ರಮದ ನಿರ್ಣಯ ಮಾಡ್ತೀವಿ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಹಾಗೆ ತೆಲಂಗಾಣಕ್ಕೆ ಚುನಾವಣಾ ಪ್ರಚಾರಕ್ಕಾಗಿ ಹೋಗ್ತಿದ್ದೇನೆ ನನಗೆ ಇರುವ ಮಾಹಿತಿ ಪ್ರಕಾರ ನಾವೇ ಗೆಲ್ತೀವಿ ನೂರಕ್ಕೆ ನೂರರಷ್ಟು ನಾವೇ ಅಲ್ಲಿ ಅಧಿಕಾರಕ್ಕೆ ಬರ್ತೇವೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಬಗ್ಗೆ ಸಿಎಂ ವಿಶ್ವಾಸ ಇದೆ ಎಂದು ಹೇಳಿದರು.
ಒಂದು ಟೀಮ್ ನಿಂದ ಸಿದ್ದರಾಮಯ್ಯ ರನ್ನು ಇಳಿಸುವ ಪ್ರಯತ್ನ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ವಿಚಾರಕ್ಕೆ
ಪ್ರತಿಕ್ರಿಯೆ ನೀಡಿದ ಅವರು, ಪಾಪ ಅಶೋಕ್ ಇವಾಗ ಏನೋ ವಿರೋಧ ಪಕ್ಷದ ನಾಯಕರಾಗಿದ್ದಾರೆ ಏನೇನೋ ಮಾತಾಡ್ಬೇಕು ಅದಕ್ಕಾಗಿ ಮಾತಾಡ್ತಿದ್ದಾರೆ ಮಾತಾಡಿದ್ರೆ ಮಾತಾಡಲಿ ಬಿಡಿ ಎಂದು ಹೇಳಿ ಹೊರಟ ಸಿಎಂ ಸಿದ್ದರಾಮಯ್ಯ
ಜಾತಿ ಗಣತಿ ವಿಚಾರ ಸಂಬಂಧ ಶಾಮನೂರು ಹೇಳಿಕೆ ವಿಚಾರ ಬಗ್ಗೆನೂ ಮಾತನಾಡಿ ಅದರ ಬಗ್ಗೆ ನಾನು ಅಮೇಲೆ ಮಾತನಾಡ್ತೀನಿ ಎಂದು ಹೇಳಿ ಹೊರಟು ಹೋದ ಸಿಎಂ ಸಿದ್ದರಾಮಯ್ಯ!