ಶಿವಮೊಗ್ಗ:- ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯಸ್ನಾನ ಅಪವಿತ್ರಗೊಳಿಸುವ ಪ್ರಯತ್ನ ನಡೆದಿದೆ ಎಂದು ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯಸ್ನಾನ ಅಪವಿತ್ರಗೊಳಿಸುವ ಪ್ರಯತ್ನ ನಡೆದಿದೆ . ನನಗೆ ತೊಂದರೆ ಕೊಟ್ಟವರು ಎಲ್ಲರೂ ಅನುಭವಿಸಿದ್ದಾರೆ. ಮುಂದೆಯೂ ಅನುಭವಿಸುತ್ತಾರೆ. ಗೋಶಾಲೆಗೆ ಗೋವುಗಳು ಬಾರದ ಹಿನ್ನೆಲೆ ಹೊಸ ಗೋ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ನಿರ್ಧಾರ ಹಿಂಪಡೆಯಬೇಕು. ಹಿಂದಿನ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಸ್ಥಾಪಿಸಬೇಕು ಎಂದು ನಿರ್ಧರಿಸಿತ್ತು. ಮದರಸಾ, ಉರ್ದು ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚುತ್ತೀರಾ? ಎಂದು ಪ್ರಶ್ನಿಸಿದರು.
ಮತ್ತೊಂದೆಡೆ ಮೃತ್ಯುಂಜಯ ನದಿಗೆ ಗೋ ಮಾಂಸದ ತ್ಯಾಜ್ಯ ಹಾಕಲಾಗಿದೆ. ಈ ನೀರು ನೇತ್ರಾವತಿ ನದಿಗೆ ಸೇರುತ್ತದೆ. ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯ ಸ್ನಾನವನ್ನು ಅಪವಿತ್ರಗೊಳಿಸುವ ಪ್ರಯತ್ನ ಇದು ಎಂದರು.