ಹುಬ್ಬಳ್ಳಿ: ಕಾರ್ತಿಕ ಮಾಸದಂದು ಮಠ ಮಂದಿರಗಳಲ್ಲಿ ಬೆಳಗಿಸುವ ದೀಪಗಳು ಮನದ ಕತ್ತಲನ್ನು ದೂರ ಮಾಡಿ, ಬೆಳಕು ಪ್ರಜ್ವಲಿಸುವಂತೆ ಮಾಡುವುದರ ಜತೆಗೆ ಅಂಧಕಾರ ಹೋಗಲಾಡಿಸುತ್ತವೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹಳೇಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಏರ್ಪಡಿಸಿದ್ದ ಲಕ್ಷ್ಮ ದೀಪೋತ್ಸವ, ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಮತ್ತು ಅಗ್ನಿಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಕ್ತರು ಕಾರ್ತಿಕ ಮಾಸದಲ್ಲಿ ದೀಪ ಪ್ರಜ್ವಲಿಸಿ, ಜ್ಞಾನದ ಜ್ಯೋತಿ ಬೆಳಗಿಸುವ ಮೂಲಕ ಅಂಧಕಾರ ದೂರ ಮಾಡಬೇಕು. ಆಧುನಿಕ ಜಗತ್ತಿನ ಒತ್ತಡದ ಜೀವನ ಶೈಲಿಯಿಂದ ಹೊರಬರಲು ಇಂತಹ ಧಾಮಿರ್ಕ ಆಚರಣೆಗಳು ಸಹಕಾರಿಯಾಗಿವೆ. ಇದರಿಂದ ಆತ್ಮಶುದ್ಧಿಯಾಗಲಿದೆ ಎಂದು ಹೇಳಿದರು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಮಟ್ಟಿ, ಉಪಾಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಜಾತ್ರೆ ಹಾಗೂ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಡಾ. ಎನ್.ಎ. ಚರಂತಿಮಠ, ಚಂದ್ರಶೇಖರ ಪಾಟೀಲ, ಈರಣ್ಣ ಬಲೂಚಗಿ, ಶಿವಯೋಗಿ ವಿಭೂತಿಮಠ, ಚಂದ್ರಶೇಖರ ಹುರಕಡ್ಲಿ, ವೀರಣ್ಣ ಹಳ್ಳಿಕೇರಿ, ರಾಚಯ್ಯ ವಾರಿಕಲ್ಮಠ, ಪರುತಪ್ಪ ಹುಬಳೀಕರ, ಬಸವರಾಜ ಚಿಕ್ಕಮಠ, ಇತರ ಗಣ್ಯರು ಪಾಲ್ಗೊಂಡಿದ್ದರು.