ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿರೋ ಘಟನೆ, ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಬಳಿ ನಡೆದಿದೆ.
ಆರೋಪಿ ಬಗರ್ ಅಲಿ ಇರಾನಿ (27) ಅನ್ನುವಾತನ ಮೇಲೆ ಗುಂಡಿನ ದಾಳಿ ನಡೆದಿದ್ದು, ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದಾಗ ಗುಂಡಿನ ದಾಳಿ ನಡೆದಿದೆ.
ನ್ಯಾ.ಡಿ ಕುನ್ಹಾಗೆ ಕ್ಷಮೆ: ಪತ್ರದ ಬಗ್ಗೆ ಕೇಂದ್ರ ಸಚಿವರು ಹೇಳಿದ್ದೇನು!?
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಸಿಪಿಐ ಧೀರಜ್ ಸಿಂಧೆ ಅವರಿಂದ ಗುಂಡಿನ ದಾಳಿ ನಡೆದಿದ್ದು, ಆರೋಪಿ ಬಗರ್ ಅಲಿ ಮೊಣಕಾಲಿಗೆ ಗಾಯವಾಗಿದೆ. ಸದ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗ್ತಿದೆ.
ಘಟನೆಯಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಹನುಮಂತ ಓಲೇಕಾರ, ಅಶೋಕ್ ಗದಗ ಹಲ್ಲೆಗೊಳಲಾಗಿದ್ದಾರೆ. ಈ ಇಬ್ಬರೂ ಪೊಲೀಸರಿಗೂ ರೋಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಕಳೆದ ಜೂನ್ 28 ರಂದು ಗದಗ ನಗರದ ಬೆಟಗೇರಿ ರೈಲ್ವೇ ಅಂಡರ್ ಬ್ರಿಜ್ ಬಳಿ ಗಂಗಾವತಿ ಪೊಲೀಸರ ಮೇಲೆ ಸಿನಿಮೀಯ ರೀತಿಯಲ್ಲಿ ಆರೋಪಿಗಳ ಗುಂಪೊಂದು ಅಟ್ಯಾಕ್ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರ ಮೇಲೆ ನಡೆದ ಹಲ್ಲೆ ಕೇಸ್ ನಲ್ಲಿ ಆರೋಪಿ ಅರೆಸ್ಟ್ ಆಗಿದ್ದನು.
ಕಳ್ಳತನದ ಆರೋಪದ ಮೇಲೆ ಗಂಗಾವತಿ ಪೊಲೀಸರು ಗದಗನಿಂದ ಆರೋಪಿ ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದನು. ಹಲ್ಲೆ ಬಳಿಕ ಆರೋಪಿ ಸ್ಕೂಟಿಯಲ್ಲಿ ಹೊಳೆಆಲೂರ ಗ್ರಾಮಕ್ಕೆ ಎಸ್ಕೇಪ್ ಆಗಿ, ಅಲ್ಲಿಂದ ಟ್ರೈನ್ ಮೂಲಕ ಮಹಾರಾಷ್ಟ್ರಕ್ಕೆ ತೆರಳಿದ್ದನು.
ಈ ಹಿನ್ನೆಲೆ ಗಂಗಾವತಿ ಪೊಲೀಸರ ಮೇಲೆ ಹಲ್ಲೆ ಕೇಸ್ ನಲ್ಲಿ ಬೆಟಗೇರಿ ಬಡಾವಣೆ ಪೊಲೀಸರಿಂದ ಆರೋಪಿಯನ್ನ ಬಂಧಿಸಲಾಗಿತ್ತು. ಆದರೆ ಇಂದು ಪಂಚನಾಮೆಗೆಂದು ಹೊಳೆಆಲೂರಗೆ ತೆರಳಿ ವಾಪಾಸ್ ಬರುವಾಗ ಈ ಘಟನೆ ಜರುಗಿದ್ದು, ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.