ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ (Terror Funding) ಮಾಡಿದ ಪ್ರಮುಖ ಪ್ರಕರಣವೊಂದನ್ನು ಎಸ್ಐಎ ಅಧಿಕಾರಿಗಳು (State Investigation Agency) ಭೇದಿಸಿದ್ದಾರೆ. ಪ್ರಕರಣ ಸಂಬಂಧ ಹಿರಿಯ ಪೊಲೀಸ್ (Police) ಅಧಿಕಾರಿ ಮತ್ತು ಪ್ರಮುಖ ಉದ್ಯಮಿ ಸೇರಿದಂತೆ ಶಂಕಿತರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಭಯೋತ್ಪಾದಕರಿಗೆ ಹಣ ನೀಡಿದ ಇತ್ತೀಚಿನ ಬಹುದೊಡ್ಡ ಪ್ರಕರಣವಾಗಿದೆ. ಕಾಶ್ಮೀರದ ತನಿಖಾ ಸಂಸ್ಥೆ ಎಸ್ಐಎ ಈ ಪ್ರಕರಣದ ಶಂಕಿತರ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ʼನಲ್ಲಿದೆ ಉದ್ಯೋಗಾವಕಾಶ..! ಬೆಂಗಳೂರಿನಲ್ಲಿಯೇ ಪೋಸ್ಟಿಂಗ್
ಪ್ರಕರಣದಲ್ಲಿ 85 ಕೋಟಿ ರೂ. ಮೊತ್ತದ ಹಣವನ್ನು ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಬಳಸಲಾಗಿದೆ ಎಂಬ ಶಂಕೆ ಇದೆ. ವಿಚಾರಣೆಯ ವೇಳೆ 85 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆಗಸ್ಟ್ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಸುಮಾರು 22 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಕರಣಕ್ಕೆ ದುಬೈ ಲಿಂಕ್ ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಚಿನ್ನ ಕಳ್ಳಸಾಗಾಣಿಕೆ ಮತ್ತು ಇನ್ನಿತರ ಅಕ್ರಮ ಮಾರ್ಗವಾಗಿ ಈ ಹಣ ವರ್ಗಾವಣೆಯಾಗಿದೆ. ಈ ಹಿಂದೆ ಬಯಲಾದ ಪ್ರಕರಣಗಳಿಗಿಂತ ಇದು ದೊಡ್ಡದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.