ಮಂಗಳೂರು:– ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮುಂಡೂರು ಎಂಬಲ್ಲಿ ರಾಮಮಂದಿರ ಮಂತ್ರಾಕ್ಷತೆ ವಿತರಣಾ ಸಂಚಾಲಕನ ಮೇಲೆ ಹಲ್ಲೆ ನಡೆದಿದೆ
ಸಂತೋಷ್ ಮೇಲೆ ಸ್ಥಳೀಯ ನಿವಾಸಿ ಧನಂಜಯ್ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದಾರೆ ಆರೋಪಿಸಲಾಗಿದೆ. ಗಲಾಟೆ ತಡೆಯಲು ಬಂದ ಸಂತೋಷ್ ತಾಯಿ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಂತೋಷ್ ಅವರು ಮನೆ ಮನೆಗೆ ಅಕ್ಷತೆ ಹಂಚುವುದಕ್ಕೆ ಒಂದು ಗುಂಪು ವಿರೋಧವ್ಯಕ್ತಪಡಿಸಿತ್ತು. ಇದೇ ದ್ವೇಷದಿಂದ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.