ಬೆಂಗಳೂರು:-;ಲಾಯರ್ ಜಗದೀಶ್ ಮನೆ ಮೇಲೆ ದಾಳಿ ನಡೆದ ಹಿನ್ನೆಲೆ ನಗರ ಪೊಲೀಸ್ ಕಮಿಷನರ್ ಗೆ ದೂರು ಕೊಡಲು ಬಿಗ್ ಬಾಸ್ ಸ್ಪರ್ಧಿ ಮುಂದಾಗಿದ್ದಾರೆ.
Breaking News: ಸೈಬರ್ ವಂಚನೆಗೆ ಬ್ರೇಕ್ ಹಾಕಲು ಡಿವಿಷನ್ ಗೆ ಒಂದೊಂದು ಓಪನ್!
.
ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಅವರನ್ನು ಭೇಟಿ ಮಾಡಬೇಕಿದೆ. ಕಳೆದ ಒಂದೂವರೆ ತಿಂಗಳಲ್ಲಿ ನಡೆದ ಎರಡನೇ ಅಟ್ಯಾಕ್ ಇದು. ಒಂದೂವರೆ ತಿಂಗಳ ಹಿಂದೆ ಸುಮಾರು 25 ಪುಡಾರಿಗಳು ಮನೆ ಹತ್ತಿರ ಬಂದು ಏನು ಮಾಡಿದ್ದರು ಎಂಬುದು ನಿಮಗೆ ಗೊತ್ತೇ ಇದೆ. ನಿನ್ನೆ ಬೆಳಿಗ್ಗೆಯಿಂದ 3 ಸಾವಿರ ಜನರನ್ನು ಭೇಟಿ ಮಾಡಿದ್ದೇನೆ. ಆಗ ಏನೂ ಸಮಸ್ಯೆ ಆಗಲಿಲ್ಲ. ಆದರೆ ಮೂರು
ಜನರು ಕುಡಿದು ಮನೆಮೇಲೆ ಅಟ್ಯಾಕ್ ಮಾಡೋಕೆ ಬಂದರು. ಭದ್ರತಾ ಸಿಬ್ಬಂದಿ ತಡೆಯೋಕೆ ಹೋದರೆ ಅದು ಸಾಧ್ಯವಾಗಿಲ್ಲ’ ಎಂದಿದ್ದಾರೆ ಜಗದೀಶ್.
ನಮ್ಮ ಮಗನ ಫೋನ್ನಿಂದ ಪೊಲೀಸರಿಗೆ ಕರೆ ಮಾಡಿದೆವು. ಪೊಲೀಸರು ಬಂದು ಅವರನ್ನು ಕಸ್ಟಡಿಗೆ ತೆಗೆದುಕೊಂಡು ಹೋದರು. ವಶಕ್ಕೆ ಪಡೆದ ವ್ಯಕ್ತಿ ಚನ್ನಪಟ್ಟಣದವನಂತೆ. ಬರೋಕೆ ಹೇಳಿ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಅವಾಜ್ ಹಾಕಿದ್ದಾನೆ. ಅಭಿಮಾನ ಓಕೆ ಆದರೆ, ಈ ರೀತಿ ಮನೆಗೆ ನುಗ್ಗೋದು ಎಷ್ಟು ಸರಿ?’ ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ.
ನಮ್ಮಂಥವರು ಈ ರೀತಿ ಹೋರಾಟ ಮಾಡಿದಾಗ ಇಷ್ಟೆಲ್ಲ ಮಾಡಿದಾಗ ಸೆಕ್ಯುರಿಟಿ ಮೆಶರ್ಸ್ ಏನು ತೆಗೆದುಕೊಂಡಿದ್ದೀರಾ. ಬೆಂಗಳೂರು ಪೊಲೀಸರ ಆಯುಕ್ತರು ಬಳಿ ಇದಕ್ಕೆ ಏನು ವಿವರಣೆ ಇದೆ. ಈ ಕಾರಣಕ್ಕೆ ಅವರನ್ನು ಭೇಟಿ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.