ಕೆಲ ಗಂಟೆಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ ಹಿಂದಿ (Bollywood) ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಧನರಾಜ್ (Vaishnavi Dhanraj). ತೀವ್ರವಾಗಿ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ ಎಂದು ಹೇಳಲಾದ ಅವರ ವಿಡಿಯೋ ವೈರಲ್ ಕೂಡ ಆಗಿದೆ.
ನಟಿಯ ಮುಖ ಮತ್ತು ಕೈಗಗಳಲ್ಲಿ ಗಾಯಗಳಾಗಿದ್ದು, ತನ್ನ ಮೇಲೆ ನಡೆದ ಹಲ್ಲೆಯ ಸಂಪೂರ್ಣ ವಿವರಣೆಯನ್ನು ಅವರು ಹೇಳಿಕೊಂಡಿದ್ದಾರೆ. ತಮಗೆ ಅತ್ತಿಗೆ, ಆಕೆಯ ತಾಯಿಯಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಜೊತೆಗೆ ಪತಿ ಕುಟುಂಬದಿಂದಲೂ ತಮಗೆ ಕಿರುಕುಳ ಆಗಿರುವುದಾಗಿ ತಿಳಿಸಿದ್ದಾರೆ.
ಕೌಟುಂಬಿಕ ಹಿಂಸೆಯ ಕುರಿತಾಗಿ ಈ ಹಿಂದೆಯೂ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪತಿಯ ಹಿಂಸೆಯಿಂದಾಗಿ ಬೇಸತ್ತು ವಿಚ್ಛೇದನೆ ಕೂಡ ನೀಡಿದ್ದರು. ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ, ಸಿಐಡಿ ಪಾತ್ರದ ಮೂಲಕ ಫೇಮಸ್ ಆದವರು.
ಕೌಟುಂಬಿಕ ಹಿಂಸೆಯ ಕುರಿತಾಗಿ ಈ ಹಿಂದೆಯೂ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪತಿಯ ಹಿಂಸೆಯಿಂದಾಗಿ ಬೇಸತ್ತು ವಿಚ್ಛೇದನೆ ಕೂಡ ನೀಡಿದ್ದರು. ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ, ಸಿಐಡಿ ಪಾತ್ರದ ಮೂಲಕ ಫೇಮಸ್ ಆದವರು