ಕಲುಬುರಗಿ: ನ್ಯೂ ಇಯರ್ ಪಾರ್ಟಿಗಾಗಿ ಗೋವಾದಿಂದ ಎಣ್ಣೆ ತರುತ್ತಿದ್ದ ಬಸ್ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮೂರು ತಂಡಗಳಿಂದ ವಿವಿದ ಕಡೆ ಪ್ರತ್ಯೇಕ ದಾಳಿ ನಡೆಸಿ ಪಣಜಿಯಿಂದ ಬಸ್ ನಲ್ಲಿ ಸಾಗಿಸುತ್ತಿದ್ದ 51 ಲಕ್ಷ ಮೌಲ್ಯದ 48 ಲೀಟರ್ ಲಿಕ್ಕರ್ ಜಪ್ತಿ ಮಾಡಿ ಆರು ಜನ ಆರೋಪಿಗಳ ಬಂಧಿಸಿದ್ದಾರೆ.
ಇದೇ ವೇಳೆ ಲಿಕ್ಕರ್ ಸಾಗಿಸಲು ಬಳಸಿದ್ದ ಖಾಸಗಿ ಬಸ್ ಹಾಗೂ ಎರಡೂ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಮಧ್ಯ ತಂದು ಸಾಗಟ ಮಾಡುತ್ತಿದ್ದ ಹಿನ್ನಲೆ ಅಬಕಾರಿ ಪೋಲೀಸರು ಕೇಸ್ ದಾಖಲಿಸಿದ್ದಾರೆ.