ಬೆಂಗಳೂರು: ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ಸ್ಮರಣಾರ್ಥಕವಾಗಿ ಇಂದು ಕೇಶವ ಕಬ್ಬಡಿ ಕ್ರೀಡಾಂಗಣದಲ್ಲಿ ಮೋದಿ ಕಬಡ್ಡಿ ಕಪ್ ಏರ್ಪಡಿಸಲಾಗಿತ್ತು. ಡಾ.ನಿರಂತರ ಗಣೇಶ್ ರವರ ನೇತೃತ್ವದಲ್ಲಿ ದೇವಸoದ್ರ ಸರ್ಕಲ್ ನ ಡಾಲರ್ಸ್ ಕಾಲೋನಿಯ ಕೇಶವ ಕಬ್ಬಡಿ ಕ್ರೀಡಾoಗಣದಲ್ಲಿ ಕಬ್ಬಡಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಇನ್ನೂ ಭಾರತದ ಹೆಮ್ಮೆಯ ಕ್ರೀಡೆ ಕಬ್ಬಡಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿoದ ಸುಮಾರು 16 ಟೀಮ್ ಗಳು ಭಾಗಿಯಾಗಿದ್ದವು. ಈ ವೇಳೆ ಮಾತನಾಡಿದ ಬಿಜೆಪಿ ಯುವ ಮುಖಂಡ ಡಾ. ನಿರಂತರ ಗಣೇಶ್ ಅವರು ಇಂದು ದೇಶ ಕಂಡ ಮುತ್ಸದಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಕಬ್ಬಡಿ ಪಂದ್ಯಾವನ್ನ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಬ್ಬಡಿಯನ್ನ ಆಯೋಜನೆ ಮಾಡಲಾಗಿದ್ದು, ಪಂದ್ಯಾ ಗೆದ್ದ ವಿಜೇತ ತಂಡಕ್ಕೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತೆ ಎಂದರು.
ಇನ್ನೂ ಕಬ್ಬಡಿ ಪಂದ್ಯಾವನ್ನ ಮಾಜಿ ಸಿಎಂ ಬಿ.ವಿ ಸದಾನಂದ ಗೌಡ ಅವರು ದೀಪಾ ಬೆಳಗಿಸುವುದರ ಮೂಲಕ ಕಬ್ಬಡಿಗೆ ಚಾಲನೆ ನೀಡಿ ಇಂದು ನಡೆಯುತ್ತಿರುವ ಕಬ್ಬಡಿ ಪಂದ್ಯಾದಲ್ಲಿ 40 ವರ್ಷದೊಳಗಿನ ಯುವಕರಿದ್ದು, ಇವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಬ್ಬಡಿಯನ್ನ ಆಯೋಜನೆ ಮಾಡಿರುವುದು ಬಹಳ ಸಂತೋಷದ ಸಂಗತಿ ಎಂದರು.