ಹುಬ್ಬಳ್ಳಿ‘: ನೂರಾನಿ ಮಾರ್ಕೆಟ್ನ ಪ್ರಿನ್ಸ್ ಬಾರ್ ಬಳಿ ನಡೆದುಕೊಂಡು ಹೋಗುತ್ತಿದ್ದ ಕಮರಿಪೇಟೆಯ ಫಯಾಜ್ ಉಂಟವಾಲೆ ಅವರಿಗೆ ನಾಲ್ವರ ಗುಂಪು ಹಲ್ಲೆ ನಡೆಸಿರುವ ಆರೋಪದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಯಾಜ್ ನಡೆದುಕೊಂಡು ಹೋಗುತ್ತಿದ್ದಾಗ ಸೆಟ್ಲಮೆಂಟ್ನ ವಿಜಯ ಬಿಜವಾಡ ಸೇರಿದಂತೆ ನಾಲ್ವರು ಆರೋಪಿಗಳು, ‘ಯಾಕ ಗುರಾಯಿಸಿ ನೋಡಾತಿಲೇ’ ಎಂದು ಒಮ್ಮಿಂದೊಮ್ಮೆಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.