ತುಮಕೂರು: ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದಕ್ಕೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ ವಿರಾಜಪೇಟೆಯಲ್ಲೋ ಕೊಡಗಲ್ಲೋ ಮೂರು ಜನ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲಿ ಏನೋ ಸಮಸ್ಯೆ ಆಗಿದೆ..ಈ ರೀತಿಯ ವಾತಾವರಣ ಸೃಷ್ಟಿ ಮಾಡಿ ಕಾಂಗ್ರೆಸ್ ನವರು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮಾಡುತಿದ್ದಾರೆ ಆದ್ದರಿಂದ ಅದಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ಬಿಜೆಪಿ ವಿರುದ್ಧ ಚೆಂಬಿನ ಜಾಹಿರಾತು ಪ್ರಕಟ ವಿಚಾರಕ್ಕೆ ಪ್ರತಿಕ್ತಿಯೇ ನೀಡಿದ್ದು, ಇದು ಕಾಂಗ್ರೆಸ್ ನವರ ನಡವಳಿಕೆ ಹಾಗೂ ಕೀಳು ಅಭಿರುಚಿ ತೋರಿಸುತ್ತದೆ..
Health Care: ಚಪಾತಿ ಹಿಟ್ಟನ್ನು ಪ್ರಿಡ್ಜ್ʼನಲ್ಲಿಟ್ಟು ಬಳಕೆ ಮಾಡಿದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ.!
ಅಲ್ಲಿ ಚೆಂಬನ್ನು ತೋರಿಸುವ ಬದಲು ರಾಜ್ಯದ ಜನರಿಂದ ತೆರಿಗೆ ರೂಪದಲ್ಲಿ ಹಣ ಲೂಟಿ ಹೊಡೆಯುವ ಚಿತ್ರ ತೋರಿಸಬೇಕು. ಕನ್ನಡಿಗರು ಕಟ್ಟಿದ ತೆರಿಗೆ ಹಣ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಲೂಟಿ ಹಣ ತುಂಬಿಕೊಂಡು ತಲೆ ಮೇಲೆ ಹೊತ್ತುಕೊಂಡು ಹೋಗುವ ಚಿತ್ರ ಹಾಕಬೇಕಿತ್ತು ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.