ಕಲಬುರ್ಗಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಮುಖಂಡ ಹಾಗು ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ ಕಳೆದ ರಾತ್ರಿ ಅಪರಿಚಿತರ ಗ್ಯಾಂಗ್ ಭೀಕರ ಹಲ್ಲೆ ನಡೆಸಿದೆ.
ಸ್ನೇಹಿತರೊಡನೆ ಚಿತ್ತಾಪುರದಿಂದ ವಾಪಾಸ್ ಕಲಬುರಗಿಗೆ ಬರ್ತಿದ್ದ ವೇಳೆ ಗುಂಪೊಂದು ವಾಹನ ಅಡ್ಡಗಟ್ಟಿದೆ..ನಂತ್ರ ಏಕಾಎಕಿ ಹಲ್ಲೆ ನಡೆಸಿ ಪರಾರಿಯಾಗಿದೆ.

ತೀವ್ರವಾಗಿ ಗಾಯಗೊಂಡ ರಾಠೋಡ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದ್ರೆ ಘಟನೆಗೆ ಕಾರಣ ಏನೂಂತ ಇನ್ನೂ ತಿಳಿದು ಬಂದಿಲ್ಲ…

