ಕೋಲಾರ :- ರಾಜ್ಯ ಸರ್ಕಾರದ ಪತನದ ಬಗ್ಗೆ ನನ್ನನ್ನು ಕೇಳಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ಮಾಲೂರಿನಲ್ಲಿ ಮಾತನಾಡಿದ ಅವರು, 2024ರ ಚುನಾವಣೆ ಬಳಿಕ ನನ್ನ ಬಳಿ ಬನ್ನಿ ಹೇಳ್ತೇನೆ. ನಾನು ಎಲ್ಲೂ ಹೋಗಲ್ಲ, ಬೆಂಗಳೂರಿನ ಮನೆಗೆ ಬಂದು ಕೇಳಿ, ಹೇಳ್ತೇನೆ” ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನು ಎನ್ಡಿಎ ಬಣದ ಮುಖ್ಯಸ್ಥರು ನರೇಂದ್ರ ಮೋದಿ, ಆದರೆ I.N.D.I.A. ಬಣದ ಮುಖ್ಯಸ್ಥರು ಯಾರು? ಅಂತ ದೇವೇಗೌಡರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕೊಲೆಗಳ ಸಂಖ್ಯೆ ಹೆಚ್ಚಳ – ಕುಮಾರಸ್ವಾಮಿ!
ಇವರು ಏನೇನೂ ಮಾಡಿದ್ದಾರೆ ಅನ್ನೋದು ನನಗೆ ಎಲ್ಲಾ ಗೊತ್ತಿದೆ. ಮುಸ್ಲಿಮರಿಗೆ, ವಾಲ್ಮೀಕಿ ಸಮುದಾಯಕ್ಕೆ, ಮಹಿಳೆಯರಿಗೆ ಮೀಸಲಾತಿ ಕೊಟ್ಟವನು ಯಾರು? ಅಂತ ಪ್ರಶ್ನಿಸಿದ್ರು.
ಇನ್ನು ಡೋಂಟ್ ಟಾಕ್ ಎಂದು ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಗುಡುಗಿದ್ದಾರೆ. ನಾನು ಎಷ್ಟು MLC ಮಾಡಿದ್ದೇನೆ? ಎಂದು ಪ್ರಶ್ನಿಸಿದ್ರು. ಜೆಡಿಎಸ್ ಜಾತ್ಯತೀತತೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಕುರಿತು ಕಿರಿಡಾಕಾರಿದ ಅವರು. ಸಿದ್ದರಾಮಯ್ಯ ನವರ ಬಳಿ ಯಾವ ಜ್ಯಾತ್ಯಾತೀತತೆ ಇದೆ? ಠಾಕ್ರೆ ಬಳಿ ಹೋಗಿ ಹೊಂದಾಣಿಕೆ ಮಾಡಿಕೊಂಡರಲ್ಲ ಇವರಿಗೆ ನಾಚಿಕೆ ಆಗಲ್ವಾ? ಅವರು ಜಾತ್ಯತೀತ ಪಕ್ಷದ ಬಗ್ಗೆ ಮಾತನಾಡಬೇಕಾ? ಅಂತ ಕಿಡಿಕಾರಿದ್ರು.
ದೇಶದಲ್ಲಿ ಎರಡು ರಾಜಕೀಯ ಬಣಗಳು ಇದೆ. ಒಂದು NDA ಹಾಗೂ ಇನ್ನೊಂದು I.N.D.I.A. ಆದರೆ ಎರಡು ಬಣಗಳ ಮುಖ್ಯಸ್ಥರು ಯಾರು? ಸುಭದ್ರ ಸರ್ಕಾರ ಕೊಟ್ಟಿರುವ ನರೇಂದ್ರ ಮೋದಿ ಅವರು ಒಂದು ಬಣದ ಮುಖ್ಯಸ್ಥರಾಗಿದ್ದಾರೆ. ಆದರೆ ಮತ್ತೊಂದು ಬಣಕ್ಕೆ ಮುಖ್ಯಸ್ಥರು ಯಾರೂ ಇಲ್ಲ ಅಂತ ದೇವೇಗೌಡರು ವ್ಯಂಗ್ಯವಾಡಿದ್ರು