ಬೆಂಗಳೂರು:- ಇಂದಿನಿಂದ ಮೂರು ದಿನ ಏಷ್ಯಾದ ಅತಿ ದೊಡ್ಡ ಬೆಂಗಳೂರು ಟೆಕ್ ಸಮ್ಮಿಟ್ 2023 ಆರಂಭಗೊಳ್ಳಲಿದೆ.
ನ.29 ರಿಂದ ಡಿ.1ವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದ್ದು, ಏಷ್ಯಾದ ಅತಿ ದೊಡ್ಡ ಟೆಕ್ ಸಮ್ಮಿಟ್ ಇದಾಗಿರಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಿಟಿಎಸ್ 2023ಗೆ ಚಾಲನೆ ನೀಡಲಿದ್ದಾರೆ. ಬಿಟಿಎಸ್ನಲ್ಲಿ ಒಟ್ಟು 75 ಸೆಷನ್, 400 ಸ್ಪೀಕರ್, 350 ಸ್ಟಾರ್ಟ್ ಅಪ್, 600 ಪ್ರದರ್ಶಕರು, 20,000 ಉದ್ಯಮಿಗಳು ಭಾಗವಹಿಸಲಿದ್ದಾರೆ. 30ಕ್ಕೂ ಅಧಿಕ ದೇಶಗಳು ಸಮ್ಮಿಟ್ ನಲ್ಲಿ ಭಾಗವಹಿಸಲಿವೆ. ಇದು ಏಷಿಯಾದ ದೊಡ್ಡ ಟೆಕ್ ಸಮ್ಮಿಟ್ ಆಗಿರಲಿದೆ.
ನಾರಾಯಣ ಮೂರ್ತಿಯೂ ಈ ಬಾರಿಯ ಬಿಟಿಎಸ್ನಲ್ಲಿ ಭಾಗವಹಿಸಲಿದ್ದಾರೆ. ಲೆಜೆಂಡ್, ಲೆಗಸಿ ಅಂಡ್ ಲೀಡರ್ ಶಿಪ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆರೋದಾ ಸಂಸ್ಥಾಪಕ ನಿಕಿಲ್ ಕಾಮತ್ ಜೊತೆ ಅವರು ಸಂವಾದ ನಡೆಸಿಕೊಡಲಿದ್ದಾರೆ. ಬ್ರೇಕಿಂಗ್ ಬೌಂಡರೀಸ್, ಇನ್ನೊವೇಷನ್ ಫ್ರಂ ಇಂಡಿಯಾ ಇಂಪಾಕ್ಟ್ ಫಾರ್ ದಿ ವರ್ಲ್ಡ್ ಎಂಬ ಥೀಮ್ನೊಂದಿಗೆ ಈ ಸಮ್ಮಿಟ್ ನಡೆಯಲಿದೆ. ಈ ಬಾರಿಯ ಬಿಟಿಎಸ್ನಲ್ಲಿ 33 ದೇಶಗಳ ಪೈಕಿ 17 ದೇಶಗಳು ತಾವೇ ಸೆಷನ್ ಕೈಗೊಳ್ಳಲಿದ್ದಾರೆ. ಬಿಟಿಎಸ್ನಲ್ಲಿ ಭಾರತ – ಅಮೆರಿಕ ಟೆಕ್ ಕಾನ್ ಕ್ಲೇವ್ ನಡೆಯಲಿದೆ. ಇದರಿಂದ ನವೋದ್ಯನಗಳಿಗೆ ಸಾಕಷ್ಟು ಸಹಾಯವಾಗಲಿದೆ. ಅಮೆರಿಕದವರಿಗೂ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಗಲಿದೆ.
ಡಾ. ಕಿರಣ್ ಮಜುಂದಾರ್-ಶಾ, ಕ್ರಿಸ್ ಗೋಪಾಲಕೃಷ್ಣನ್, ಪ್ರಶಾಂತ್ ಪ್ರಕಾಶ್, ನಿವೃತಿ ರೈ, ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಇನ್ವೆಸ್ಟ್ ಇಂಡಿಯಾದ ಸಿಇಒ; ಬಿ.ವಿ.ನಾಯ್ಡು, ಅಧ್ಯಕ್ಷರು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್; ಮತ್ತು ಅರವಿಂದ್ ಕುಮಾರ್, ಭಾರತೀಯ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಮಹಾನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರು ಟೆಕ್ ಶೃಂಗಸಭೆ-2023 ವೈವಿಧ್ಯಮಯ ಮತ್ತು ಉತ್ಕೃಷ್ಟ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಇದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡೀಪ್ ಟೆಕ್, ಸ್ಟಾರ್ಟ್-ಅಪ್ಗಳು ಮತ್ತು ಬಯೋಟೆಕ್, ಅಂತಾರಾಷ್ಟ್ರೀಯ ಪ್ರದರ್ಶನ, ಜಾಗತಿಕ ಆವಿಷ್ಕಾರ ಮೈತ್ರಿ, ಭಾರತ-ಅಮೆರಿಕ ಟೆಕ್ ಕಾನ್ಕ್ಲೇವ್, ಆರ್ ಅಂಡ್ ಡಿ-ಲ್ಯಾಬ್2-ಮಾರುಕಟ್ಟೆ, ಬಿ2ಬಿ ಸಭೆಗಳನ್ನು ಒಳಗೊಂಡಿರುತ್ತದೆ. ಎಸ್.ಟಿ.ಪಿ.ಐ-ಐಟಿ ರಫ್ತು ಪ್ರಶಸ್ತಿಗಳು, ಸ್ಮಾರ್ಟ್ ಬಯೋ ಪ್ರಶಸ್ತಿಗಳು, ವಿಸಿ ಪ್ರಶಸ್ತಿಗಳು, ಎಟಿಎಫ್ ಪ್ರಶಸ್ತಿಗಳು, ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜಾಂಡ್ ಬಯೋ ಪೋಸ್ಟರ್ಗಳು ಸಹ ಶೃಂಗಸಭೆಯ ಭಾಗವಾಗಿರಲಿದೆ