ತೆಲುಗಿನ ಬಿಗ್ ಬಾಸ್ ಸೀಸನ್ 7ರ (Bigg Boss Telugu 7) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಟ ಕಮ್ ನಿರೂಪಕ ನಾಗಾರ್ಜುನ ನಿರೂಪಣೆಯಲ್ಲಿ ಬಿಗ್ ಬಾಸ್ ಶೋ ಮೂಡಿ ಬರುತ್ತಿದೆ. ಇದೀಗ ತೆಲುಗಿನ ಸಿನಿಮಾದಲ್ಲಿ ಕನ್ನಡದ ನಟಿಯನ್ನ ಪರಿಚಯಿಸೋದರ ಜೊತೆಗೆ ಕನ್ನಡದ ಕಂಪನ್ನ ಕೂಡ ಪಸರಿಸಿದ್ದಾರೆ. ಶೋಭಾ ಶೆಟ್ಟಿ (Shobha Shetty) ಮತ್ತು ಪ್ರಿಯಾಂಕಾ (Priyanka) ಜೊತೆ ಆಶಿಕಾ ರಂಗನಾಥ್ (Asika Ranganath) ಕನ್ನಡದಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.
ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡತಿ ಆಶಿಕಾ ರಂಗನಾಥ್ ಅವರು ಈಗ ನಾಗಾರ್ಜುನ ಅಭಿನಯದ ‘ನಾ ಸಾಮಿರಂಗ’ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ. ತಮ್ಮ ಹೊಸ ಸಿನಿಮಾದ ನಾಯಕಿಯನ್ನು ಪರಿಚಯ ಮಾಡುವುದಕ್ಕಾಗಿ ಬಿಗ್ ಬಾಸ್ ಶೋಗೆ ಆಶಿಕಾರನ್ನು ನಾಗಾರ್ಜುನ ಆಹ್ವಾನಿಸಿದ್ದರು. ಬಿಗ್ ಬಾಸ್ ವೇದಿಕೆ ಮೇಲೆ ಆಶಿಕಾ ರಂಗನಾಥ್ ಅವರನ್ನು ಕಂಡ ಸ್ಪರ್ಧಿಗಳು ಖುಷಿಯಾದರು.
ತೆಲಂಗಾಣದ 2ನೇ ಮುಖ್ಯಮಂತ್ರಿ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ
ನಾಗಾರ್ಜುನ (Nagarjuna) ಅವರು, ನಮ್ಮ ನಾಯಕಿಗೆ ಎಷ್ಟು ಮಾರ್ಕ್ಸ್ ಕೊಡುತ್ತೀರಿ ಎಂದು ಸ್ಪರ್ಧಿ ಅಮರ್ಗೆ ಕೇಳಿದರು. ಅದಕ್ಕೆ ಅವರು, 100ಕ್ಕೆ 1000 ಅಂಕ ಕೊಡುತ್ತೇನೆ ಸಾರ್ ಎಂದು ಹೇಳಿ, ನಾಚಿಕೊಂಡರು. ಇದನ್ನು ಕಂಡ ಆಶಿಕಾ, ಖುಷಿಯಿಂದ ಫ್ಲೈಯಿಂಗ್ ಕಿಸ್ ಕೊಟ್ಟರು. ಆಗ ನಾಗಾರ್ಜುನ, ಒಮ್ಮೆ ಶೋಭಾ ಶೆಟ್ಟಿ ಜೊತೆ ಮಾತನಾಡಿಸುತ್ತೇನೆ ತಾಳು ಎಂದು ಹೇಳಿದರು.