ಬೆಂಗಳೂರು:- ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ಕ್ಯಾಲೆಂಡರ್ ವರ್ಷವನ್ನು ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕ ಜನತೆ ಅದ್ದೂರಿ ಸ್ವಾಗತ ಮಾಡಿದ್ದಾರೆ.
ಪ್ರಪಂಚದಾದಂತ್ಯ ಡಿಸೆಂಬರ್ 31ರ ಸಂಜೆಯಿಂದಲೇ ಈ ಸಂಭ್ರಮಾಚರಣೆ ಜೋರಾಗಿತ್ತು. ಜನರು ಮನೆ ಮಂದಿಯೊಂದಿಗೆ ಪಾರ್ಟಿ ಅಥವಾ ಟ್ರಿಪ್ ಆಯೋಜಿಸುವ ಮೂಲಕ ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಷನ್ ಮಾಡಿದರು.
ಈ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮದ ನಡುವೆಯೇ BMTCಗೆ ಕೋಟಿ-ಕೋಟಿ ಆದಾಯ ಹರಿದು ಬಂದಿದೆ.
ಡಿ.31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡಿದ್ದವು. ಬಿಎಂಟಿಸಿಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.
ನಿನ್ನೆ ಒಂದೇ ದಿನ 35 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಈ ಹಿನ್ನೆಲೆ ಬಿಎಂಟಿಸಿಗೆ 5 ಕೋಟಿ ಹಣ ಕಲೆಕ್ಷನ್ ಆಗಿದೆ. ಒಟ್ಟು 35,70,842 ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಇದರಿಂದ ಬಿಎಂಟಿಸಿಗೆ ಒಟ್ಟು 5.48 ಕೋಟಿ ರೂ. ಸಂಗ್ರಹ ಆಗಿದೆ ಎಂದು ತಿಳಿದು ಬಂದಿದೆ.