ಕಲಬುರಗಿ:- ಲಂಕೆಯಲ್ಲಿರುವ ಸೀತೆಯನ್ನ ಬಿಡಿಸಿಕೊಂಡು ಬರಲು ಪ್ರಭು ಶ್ರೀರಾಮ ತಪಸ್ಸು ಮಾಡಿದ ಜಾಗವೊಂದು ಕಲಬುರಗಿ ಜಿಲ್ಲೆಯಲ್ಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ..
ಹೌದು ಕಮಲಾಪುರ ತಾಲೂಕಿನ ಸೊಂತ ಎಂಬ ಊರಲ್ಲಿ ತಪಸ್ಸು ಮಾಡಿದ್ದನಂತೆ ರಾಮ. ಗ್ರಾಮಸ್ಥರ ಪ್ರಕಾರ ಊರಿನ ರಾಮತೀರ್ಥ ಎಂಬ ಗುಡಿಯಲ್ಲಿನ ಈಶ್ವರ ಲಿಂಗಕ್ಕೆ ಶ್ರೀರಾಮ ಪೂಜೆ ಮಾಡಿದ್ದ ಅದಕ್ಕಾಗಿ ಗುಡಿ ಮುಂದಿನ ಕಲ್ಯಾಣಿಯಲ್ಲಿನ ನೀರನ್ನ ತಂದು ಲಿಂಗಕ್ಕೆ ಪೂಜಿಸಿದ್ದ ಅನ್ನೋ ಮಾತು ಪ್ರಚಲಿತದಲ್ಲಿದೆ.
ಹೀಗಾಗಿ 22 ರಂದು ನಡೆಯುವ ರಾಮಮಂದಿರ ಉದ್ಘಾಟನೆ ವೇಳೆ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.ಅದಕ್ಕಾಗಿ ಗುಡಿ ಮುಂದಿನ ಕಲ್ಯಾಣಿಯನ್ನ ಸ್ವಚ್ಛಗೊಳಿಸಿ ಕಂಗೊಳಿಸುವಂತೆ ಮಾಡಲಾಗ್ತಿದೆ…