ಬೆಳಗಾವಿ: ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಚರ್ಚೆ ವಿಚಾರಕ್ಕೆ ಬೆಳಗಾವಿಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರು ಪರ ಇಲ್ಲ, ಯಾರ ವಿರೋಧವೂ ಇಲ್ಲ. ಸದ್ಯಕ್ಕೆ ಡಿಸಿಎಂ ಸ್ಥಾನ ಖಾಲಿ ಇಲ್ಲ ಖಾಲಿ ಇದ್ದಾಗ ನೋಡ್ತಾರೆ ಎಂದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ನಿಲುವು ಇರುವ ಪಕ್ಷ ಕಾಂಗ್ರೆಸ್.ವೈಯಕ್ತಿಕವಾಗಿ ಕೆಲವರು ಮಾತಾಡಿದ್ದಾರೆ. ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಜವಾಬ್ದಾರಿ ಅಧ್ಯಕ್ಷರು, ಮುಖ್ಯಮಂತ್ರಿ ಇದ್ದಾರೆ ಅವರು ನೋಡಿಕೊಳ್ತಾರೆ. ಡಿಸಿಎಂ ಚರ್ಚೆ ವಿಚಾರದ ಕುರಿತು ನಾನು ಮಾತಾಡಲ್ಲ ಎಂದು ಹೇಳಿದರು.
![Demo](https://ainlivenews.com/wp-content/uploads/2023/12/spoorthi-1.jpg)
ದರ್ಶನ್ ಜೊತೆ ಈ ಸ್ಟಾರ್ ನಟಿಗೂ ಇತ್ತಾ ಸಂಬಂಧ..? ಸ್ಫೊಟಕ ಮಾಹಿತಿ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್
ಚನ್ನಪಟ್ಟಣದಲ್ಲಿ ಡಿ.ಕೆ ಶಿವಕುಮಾರ್ ವಾಸ್ತವ್ಯ ವಿಚಾರಕ್ಕೆ, ಅವರು ಅಧ್ಯಕ್ಷರು ನೋಡಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣಕ್ಕೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಡಿಕೆಶಿ ಅಥವಾ ಡಿಕೆ ಸುರೇಶ್ ಯಾರು ಅಂತಾ ತೀರ್ಮಾನ ಆಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಕುಳಿತು ಚರ್ಚೆ ಮಾಡುತ್ತಾರೆ ಎಂದು ತಿಳಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)