ಮಾಲೂರು – ಪದೇಪದೇ ಶಾಸಕ ನಂಜೇಗೌಡ ಮಾಲೂರಿನ ಅಭಿವೃದ್ಧಿ ಬಗ್ಗೆ ಹೊರಗಿನ ವ್ಯಕ್ತಿಗಳು ಮಾತನಾಡುವ ಅಧಿಕಾರವಿಲ್ಲ ಅಂತ ಹೇಳ್ತಾರೆ, ನಮಗೆ ಮಾತನಾಡುವ ಅಧಿಕಾರ ಇಲ್ಲ ಅಂದ್ರೆ, ಅಧಿಕಾರ ಇದ್ದವರೇ ಮಾತನಾಡಲಿ, ನನಗೂ ಕ್ಷೇತ್ರದ ಮತದಾರರು 50 ಸಾವಿರ ಮತ ನೀಡಿದ್ದಾರೆ ಎಂದು ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಹೂಡಿ ವಿಜಯ್ ಕುಮಾರ್ ರವರು ಶಾಸಕ ನಂಜೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಬರ್ತಡೇ ಖುಷಿಯಲ್ಲಿದ್ದ ಬಾಲಕನ ಮೇಲೆ ಯಮನ ಕಣ್ಣು: ಮಗು ಕಳೆದುಕೊಂಡ ಪೋಷಕರು ಆಕ್ರಂದನ!
ಮಾಲೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೂ ಜನ 50 ಸಾವಿರ ಮತ ನೀಡಿದ್ದಾರೆ, ನಾವು ಅವರ ಪರವಾಗಿ ಮಾತನಾಡಬಾರದ, ಮಾಲೂರಿಗೆ ಬೇರೆ ಕಡೆಯಿಂದ ಬಂದು ಇಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ ಆದರೆ ಶಾಸಕರು ಅದನ್ನು ಪ್ರಶ್ನಿಸುವುದಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾಡಲ್ಲ ಅಂತ ಶಾಸಕ ನಂಜೇಗೌಡರು ನಿರ್ಣಯ ಮಾಡಿದ್ದಾರೆ, ಯಾರೆಷ್ಟೇ ಹೋರಾಟಗಳನ್ನು ಮಾಡಿದರು ಚುನಾವಣಾ ಸಂದರ್ಭದಲ್ಲಿ ವೋಟಿಗೆ ಸಾವಿರ ರೂಪಾಯಿ ಹೆಚ್ಚಾಗಿ ಕೊಟ್ಟರೆ ನಾನು ಗೆಲ್ತೀನಿ ಅಂತ ಅಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು ಅದಕ್ಕೆ ಸ್ಪಂದಿಸದೆ ಕೇವಲ ಬಾಯಿಗೆ ಬಂದಂತೆ ಶಾಸಕರು ಮಾತನಾಡುತ್ತಾರೆ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.