ಅಮೆರಿಕ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಅವರು ವಿಶೇಷ ದಾಖಲೆ ಬರೆದಿದ್ದಾರೆ. 2024 ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಪ್ರದರ್ಶನ ಅದ್ಭುತವಾಗಿದೆ. ಪಾಕಿಸ್ತಾನದ ವಿರುದ್ಧ ಅಮೋಘ ಬೌಲಿಂಗ್ ಮಾಡಿದ್ದ ಅರ್ಷದೀಪ್ ಅಮೆರಿಕ ವಿರುದ್ಧವೂ ಅಮೋಘ ಬೌಲಿಂಗ್ ಮಾಡಿದ್ದಾರೆ
ನನ್ನ ಗಂಡ ಜಗಳ ಮಾಡಲ್ಲ.. ಹೆಚ್ಚು ಕಾಳಜಿ ಇಷ್ಟವಿಲ್ಲ..ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ..!
ಈ ಎಡಗೈ ವೇಗಿ ಅಮೆರಿಕದ ಆರಂಭಿಕ ಆಟಗಾರ ಜಹಾಂಗೀರ್ ಅವರನ್ನು ಮೊದಲ ಎಸೆತದಲ್ಲಿಯೇ ಪೆವಿಲಿಯನ್ಗಟ್ಟಿದರು. ಈ ವಿಕೆಟ್ನೊಂದಿಗೆ ಅರ್ಷದೀಪ್ ಸಿಂಗ್ ಟಿ20 ಅಂತರಾಷ್ಟ್ರೀಯ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ಭಾರತದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನೂ ನಿರ್ಮಿಸಿದರು. 2022 ರ ಟಿ20 ವಿಶ್ವಕಪ್ನಲ್ಲಿ ಭುವನೇಶ್ವರ್ ಕುಮಾರ್ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರು. ಆದರೆ ಇದು ಪಂದ್ಯದ ಮೊದಲ ಎಸೆತವಾಗಿರಲಿಲ್ಲ. ಬದಲಿಗೆ ಅದು ಪಂದ್ಯದ ಎರಡನೇ ಇನ್ನಿಂಗ್ಸ್ನ ಮೊದಲ ಎಸೆತವಾಗಿತ್ತು
ಅಮೆರಿಕ ವಿರುದ್ಧದ ಮೊದಲ ಓವರ್ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಸಿಂಗ್ ಮತ್ತೊಂದು ದೊಡ್ಡ ಸಾಧನೆ ಮಾಡಿದ್ದಾರೆ. ಅದೆನೆಂದರೆ ಟಿ20ಯಲ್ಲಿ ಪವರ್ಪ್ಲೇಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇದೀಗ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ.
ಟಿ20 ಅಂತರಾಷ್ಟ್ರೀಯ ಪಂದ್ಯಗಳ ಪವರ್ಪ್ಲೇಯಲ್ಲಿ ಇದುವರೆಗೆ 28 ವಿಕೆಟ್ ಪಡೆದಿರುವ ಅರ್ಷದೀಪ್ ಸಿಂಗ್, 26 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾರನ್ನು ಹಿಂದಿಕ್ಕಿದ್ದಾರೆ.