ವಿಜಯಪುರ:- ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೇರೆಯವರ ಸ್ಥಿರಾಸ್ತಿಗಳನ್ನು ತಮ್ಮದೇ ಎಂದು ಮಾರಾಟ ಮಾಡುತ್ತಿದ್ದ 18 ಜನ ಆರೋಪಿಗಳನ್ನು ವಿಜಯಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಭೀಕರ ಮಳೆ ಆರ್ಭಟ.. ಗಂಗಾವಳಿ ನದಿ ಸೇತುವೆ ಮುಳುಗಡೆ. ಅಪಾಯಕ್ಕೆ ಆಹ್ವಾನ!
ಸರ್ವೇ ನಂಬರ್ 344/ಬ/1 ಪೈಕಿ 1 ಎಕರೆ 36 ಗುಂಟೆ ಜಮೀನನ್ನು ಕ್ರಯ ಪತ್ರ ಮಾಡಿಕೊಟ್ಟು ಖರೀದಿ ಮಾಡುವವರ ಬಳಿ ಮುಂಗಡವಾಗಿ 25 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಚಾಂದಪೀರ ತಂದೆ ಮಹಮ್ಮದಗೌಸ್ ರಮಲಿ, ಮಹಿಬೂಬಸಾಬ ಹಡಗಲಿ, ಸಿಕಂದರ ಗಂಗನಳ್ಳಿ, ದತ್ತು ತಿಕ್ಕುಂಡಿ, ವಾಗೇಶ ಪೋಳ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ 18.50 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ದಿವಟಗೇರಿ ಗಲ್ಲಿಯಲ್ಲಿ ನೀಲವ್ವ ನಿರ್ವಾಣಶೆಟ್ಟಿ ಎಂಬುವವರಿಗೆ ವಿಜಯಪುರ ತಾಲೂಕು ಕಸಬಾದಲ್ಲಿರುವ ಸರ್ವೇ ನಂಬರ್ 15/4 ಕ್ಷೇತ್ರ 10 ಗುಂಟೆ ಜಮೀನನನ್ನು ಸಹ ನಕಲಿ ದಾಖಲಾತಿಗಳನ್ನು ತಯಾರಿಸಿ 5 ಲಕ್ಷ ರೂಪಾಯಿಗಳಿಗೆ ಭೂತನಾಳ ತಾಂಡಾದ ಶಂಕರ ಚವ್ಹಾಣ ಎಂಬಿವವರಿಗೆ ಮಾರಾಟ ಮಾಡಿದ್ದ ಗ್ಯಾಂಗ್ನ್ನು ಬಂಧಿಸಲಾಗಿದೆ. ಶಂಕರ ಚವ್ಹಾಣ, ಭೀಮರಾಯ ಕಟ್ಟಿಮನಿ, ನಾಗಪ್ಪ ಕೋಲಕಾರ ಎಂಬುವವರನ್ನು ಬಂಧಿಸಲಾಗಿದೆ.