ಜನಪ್ರಿಯ ತಮಿಳಿನ ನಂದಿನಿ ಧಾರಾವಾಹಿಯ ನಾಯಕ ನಟ ರಾಹುಲ್ ರವಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಪತ್ನಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಅವರ ಮೇಲಿತ್ತು. ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದ ನಟನ ಪತ್ನಿ ದೂರು ದಾಖಲಿಸಿದ್ದರು. ಅರೆಸ್ಟ್ ವಾರೆಂಟ್ ಜಾರಿ ಆಗುತ್ತಿದ್ದಂತೆಯೇ ರವಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತನ್ನ ಪತಿಗೆ ಮತ್ತೋರ್ವ ಹುಡುಗಿಯ ಜೊತೆ ಒಡನಾಟ ಇರುವ ವಿಷಯ ತಿಳಿಯುತ್ತಿದ್ದಂತೆಯೇ ಆ ಹುಡುಗಿಯೊಂದಿಗೆ ಲಕ್ಷ್ಮಿ ಜಗಳ ಕೂಡ ಆಡಿದ್ದರು. ನಂತರ ಲಕ್ಷ್ಮಿಯೊಂದಿಗೆ ರಾಹುಲ್ ಕೂಡ ಸಾಕಷ್ಟು ಬಾರಿ ಜಗಳ ಮಾಡಿದ್ದಾರಂತೆ. ಜೊತೆಗೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ನಿ ಮಾನಸಿಕವಾಗಿ ಸರಿ ಇಲ್ಲವೆಂದು ಹೇಳಿಕೊಂಡಿದ್ದರಂತೆ. ಈ ಎಲ್ಲ ಕಾರಣದಿಂದಾಗಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ನಟ ನಾಪತ್ತೆ ಆಗಿದ್ದಾರೆ ಎನ್ನುವುದು ಸದ್ಯಕ್ಕಿರೋ ಮಾಹಿತಿ. ಬಂಧನದ ಭೀತಿಯ ಕಾರಣದಿಂದಾಗಿ ಅವರು ಊರು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ನಟನಿಗಾಗಿ ಹುಡುಕಾಟ ನಡೆಸಿದ್ದಾರೆ.