ಬಾಗಲಕೋಟೆ : ವ್ಯಕ್ತಿಯೋರ್ವರಿಗೆ ಬಡ್ಡಿಗಾಗಿ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದ ಖಾಸಗಿ ಫೈನಾನ್ಸ್ನ ಇಬ್ಬರನ್ನು ಬನಹಟ್ಟಿ ಪೋಲಿಸ್ ಠಾಣೆಯ ಪಿಎಸ್ ಐ ಶಾಂತಾ ಹಳ್ಳಿ ಬಂಧಿಸಿ ಕ್ರಮ ಜರುಗಿಸಿದ್ದಾರೆ. ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ರಾಜೇಶ್ವರಿ ಸಂಗಪ್ಪ ಮಾದರರು ಜಮಖಂಡಿ ತಾಲೂಕಿನ ಹುನ್ನೊರ ಗ್ರಾಮದ ಸ್ಪಂದನಾ ಸ್ಪೊರ್ತಿ ಫೈನಾನ್ಸಿಯಲ್ ಬ್ಯಾಂಕ್ನಿಂದ 80 ಸಾವಿರ ರೂಪಾಯಿಗಳಷ್ಟು ಸಾಲ ಪಡೆದಿದ್ದು, ಇದ್ದಕ್ಕೆ ಶೇ.25ರಷ್ಟು ಮೀಟರ್ ಬಡ್ಡಿಯಾಗಿ ಮಾಸಿಕ 4,270 ಹಣ ಕಟ್ಟಬೇಕಿತ್ತು.
ಇಂದು ಬಂಡಿಗಣಿ ಗ್ರಾಮದ ಅವರ ನಿವಾಸಕ್ಕೆ ಆಗಮಿಸಿದ ಫೈನಾನ್ಸ್ನ ಸಿಬ್ಬಂದಿ ಸೋನು ಬಾಗಲಕೋಟ ಹಾಗೂ ದಾನಮ್ಮ ಸಾವಳಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತಕ್ಷಣವೇ ಹಣ ನೀಡುವಂತೆ ಪೀಡಿಸಿದ್ದಾರೆ. ರಾಜೇಶ್ವರಿ ಮಾದರ ತಕ್ಷಣ ಬನಹಟ್ಟಿ ಠಾಣೆಗೆ ತೆರಳಿ ದೊರು ನೀಡಿದ್ದರ ಫಲವಾಗಿ ಇಬ್ಬರ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ ಬನಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ ಎಸ್ ಐ ಶಾಂತಾ ಹಳ್ಳಿ ತನಿಖೆ ಮುಂದುವರಸಿದ್ದಾರೆ.