ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸೈಬರ್ ಪೋಲೀಸರ್ ಯಶಸ್ಸಿಯಾಗಿದ್ದಾರೆ.ಆರೋಪಿಗಳಿಂದ ಸುಮಾರು 17 ಲಕ್ಷ ರೂ.ಮೌಲ್ಯದ, 16.940 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಘಟನೆ ಜರುಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಆರ್.ಎಚ್.ಕಾಲೋನಿಯ ಶ್ರೀಪಾದೂ ಬಿಶ್ವಾಸ್(56) ಮತ್ತು ಪಶನ್ ಜಿತ್ ಮಂಡಲ್(31) ಬಂಧಿತ ಆರೋಪಿಗಳು.
ಬಳ್ಳಾರಿ ನಗರದ ಹೊರವಲಯ ಸಿರುಗುಪ್ಪ ರಸ್ತೆಯ ಲಕ್ಷ್ಮೀನಗರ ಕ್ಯಾಂಪ್ ಬಳಿಯ ಹೊಲವೊಂದರಲ್ಲಿ ಆರೋಪಿಗಳಿಬ್ಬರೂ 17 ಲಕ್ಷ ರೂ. ಮೌಲ್ಯದ 16.940 ಕೆಜಿ ಗಾಂಜಾವನ್ನು ಮಾರಾಟ ಮಾಡಲು ಮುಂದಾಗಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದಿರುವ ಅಪರಾಧ ಪೊಲೀಸ್ ಠಾಣೆಯ ಸಿಪಿಐ ವೈ.ಎಚ್.ರಮಾಕಾಂತ್, ಪಿಎಸ್ವೈ ವಲಿಬಾಷ, ಸಿಬ್ಬಂದಿಗಳಾದ ಕೆ.ಸುರೇಶ್, ಕೆ.ವೇಣುಗೋಪಾಲ್, ಕೆ.ತಿಪ್ಪೇರುದ್ರಪ್ಪ ಸೇರಿ ಇತರರು ದಾಳಿ ನಡೆಸಿ, ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.