ರಾಮನಗರ : ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿದ್ದಾನೆ. ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶದಲ್ಲಿ ಬೆಂಕಿ ಇಟ್ಟ ಪರಿಣಾಮ 30 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಸದ್ಯ ಬೆಂಕಿ ಹಾಕಿದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೂಳ್ಯ ಗ್ರಾಮದ ರಾಜಪ್ಪ(42) ಎಂಬುವನು ಬಂಧಿತನಾಗಿದ್ದು, ಈತ ಮೇಕೆಗಳ ಮೇಯಿಸಲು ಹೋಗಿದ್ದಾಗ ಒಣ ಹುಲ್ಲು ಇರೋದನ್ನು ನೋಡಿದ್ದಾನೆ.. ಈ ಒಣಹುಲ್ಲು ಸುಟ್ಟರೆ ಹೊಸ ಚಿಗುರು ಬೆಳೆಯುವುದು, ತಮ್ಮ ಮೇಕೆಗಳಿಗೆ ಮೇವು ಸಿಗುವುದು ಎಂದು ಬೆಂಕಿ ಹಚ್ಚಿದ್ದಾನೆ. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟ್ರಲ್ಲಾಗಲೇ 30 ಎಕರೆಯಷ್ಟು ಅರಣ್ಯ ಭಸ್ಮವಾಗಿದೆ. ಅಲ್ಲದೇ ಹೆಬ್ಬಾವು ಸೇರಿದಂತೆ ಹಲವು ವನ್ಯಜೀವಿಗಳು ಬೆಂಕಿಗಾಹುತಿಯಾಗಿವೆ.