ಧಾರವಾಡ: ಎಪಿಎಂಸಿಗೆ ತಂದಿದ್ದ ರೈತರ ಕಡಲೆಗೆ ಕನ್ನ ಹಾಕಿದ್ದ ಖದೀಮರನ್ನು ಪೊಲೀಸರು 24 ಗಂಟೆಗಳಲ್ಲೇ ಬಂಧಿಸಿದ್ದಾರೆ. ಧಾರವಾಡ ಎಪಿಎಂಸಿಯಲ್ಲಿ ರೈತರು ಮಾರಾಟ ಮಾಡೋಕೆ ಎಪಿಎಂಸಿಗೆ ತಂದಿದ್ದ 52 ಸಾವಿರ ಮೌಲ್ಯದ 7.5 ಕ್ವಿಂಟಾಲ್ ತೂಕದ 13 ಚೀಲ ಕಡಲೆ ಕಳ್ಳತನ ಮಾಡಲಾಗಿತ್ತು.
Bangalore Crime: ಹಗಲಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ, ರಾತ್ರಿ ವೇಳೆ ಮನೆಗಳ್ಳತನ: ಮೂವರು ಅರೆಸ್ಟ್!
ಈ ಸಂಬಂಧ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆಗಳಲ್ಲೇ ಮೂವರು ಕಳ್ಳರ ಬಂಧಿಸಿದ್ದಾರೆ. ಅರುಣ ಮಾಡಮಗೇರಿ, ಪ್ರಕಾಶ ಹುಬ್ಬಳ್ಳಿ, ಮಂಜುನಾಥ ಜಮ್ಮನಾಳ ಬಂಧಿತರಾಗಿದ್ದು, ಬಂಧಿತರಿಂದ 7.5 ಕ್ವಿಟಾಂಲ್ ಕಡಲೆ ಮತ್ತು ದ್ವಿಚಕ್ರ ವಾಹನಗಳ ಕಡಲೆ ವಾಹನ ಸೇರಿ 1.82 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.