ಬೆಂಗಳೂರು: ಹುಬ್ಬಳ್ಳಿ ಕರಸೇವಕರ ಬಂಧನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ (BJP) ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಹೈಕಮಾಂಡ್ಗೆ (Congress) ವರದಿ ನೀಡಿದೆ
ಹುಬ್ಬಳ್ಳಿ ಪ್ರಕರಣದ (Hubballi Case) ಬಗ್ಗೆ ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್ಗೆ ಲಾಂಗ್ ಪೆಂಡಿಂಗ್ ಕೇಸ್ ವರದಿ ನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದಲೂ ದೀರ್ಘ ಸಮಯದಿಂದ ಇದ್ದ ಪ್ರಕರಣಗಳ ಕ್ಲೀಯರ್ ಡ್ರೈವ್ ನಡೆಯುತ್ತಿದೆ. ಸಹಜವಾಗಿ ಎಲ್ಲ ಕಡೆ ಲಾಂಗ್ ಪೆಂಡಿಂಗ್ ಕೇಸ್ ಕ್ಲಿಯರ್ ವೇಳೆ ಕರಸೇವಕರದ್ದೂ ಸೇರಿದೆ ಎಂಬ ವರದಿ ನೀಡಲಾಗಿದೆ.
BJP Protest: ʼಕೈʼ ಸರ್ಕಾರದ ವಿರುದ್ಧ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ಸರ್ಕಾರದ ವಿರುದ್ಧ ಕೇಸರಿ ರಣಕಹಳೆ
ಬಿಜೆಪಿ ಅವರು ಹುಬ್ಬಳ್ಳಿ ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ರಾಮಮಂದಿರ ಲೋಕಾರ್ಪಣೆ ಸಮಯದಲ್ಲಿ ಈ ಪ್ರಕರಣ ಸುದ್ದಿ ಆಗುತ್ತಿರುವುದು ಕಾಕತಾಳೀಯ ಎಂದು ವರದಿಯಲ್ಲಿ ಕಾಂಗ್ರೆಸ್ ತಿಳಿಸಿದೆ.
ಈ ಮಧ್ಯೆ ರಾಮ ಮಂದಿರ ಉದ್ಘಾಟನೆ ವೇಳೆ ಇದೆಲ್ಲ ಬೇಕಿತ್ತಾ ಎಂದು ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನ ಹೊರಹಾಕಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಪರಮೇಶ್ವರ್ ಹೇಳಿದ್ದೇನು?
ಹುಬ್ಬಳ್ಳಿ ಗಲಭೆ (Hubballi Riots) ವಿಚಾರವಾಗಿ ಹಿಂದೂ (Hindu) ಕಾರ್ಯಕರ್ತರ ಬಂಧನ ಉದ್ದೇಶಪೂರ್ವಕ ಅಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (Parameshwar) ಹಿಂದೆ ಹೇಳಿದ್ದರು.