ಧಾರವಾಡ : ನಂಬರ್ ಪ್ಲೇಟ್ ಚೇಂಜ್ ಮಾಡಿ ಸ್ಪಿರಿಟ್ ಸಾಗಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಗೋವಾ ಕ್ಕೆ ಹೋಗುವಾಗ ಘಟನೆ ನಡೆದಿದೆ.
ಅಬಕಾರಿ ಇಲಾಖೆಯ ಅಧಿಕಾರಿಗಳು ರೇಡ್ ಮಾಡಿದ್ದು, ಟ್ಯಾಂಕರ್ ಸಮೇತ ಚಾಲಕ ಓಂ ಪ್ರಕಾಶ್ನನ್ನು ಬಂಧಿಸಿದ್ದಾರೆ. ಬಂಧಿತ ಕಳೆದ 6 ತಿಂಗಳಿಂದ ಅಕ್ರಮವಾಗಿ ಟ್ಯಾಂಕರ್ ಮುಖಾಂತರ ಸಾಗಾಟ ಮಾಡುತ್ತಿದ್ದ ಓಂ ಪ್ರಕಾಶ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಟ್ಯಾಂಕರ್ನಲ್ಲಿ 40,000 ಲೀಟರ್ ಸ್ಪಿರಿಟ್ ಸಾಗಾಟ ಮಾಡುವಾಗ ಅಧಿಕಾರಿಗಳು ದಾಳಿ ಮಾಡಿದ್ದು, 24 ಲಕ್ಷ ಮೌಲ್ಯದ ಸ್ಪಿರಿಟ್, 55 ಲಕ್ಷ ಮೌಲ್ಯದ ಟ್ಯಾಂಕರ್ ಸಮೇತ ಓಂ ಪ್ರಕಾಶ್ನನ್ನು ಬಂಧಿಸಿದ್ದಾರೆ. ಸದ್ಯ ಅಬಕಾರಿ ಇಲಾಖೆಯ ಅಧಿಕಾರಿಗಳು ಟ್ಯಾಂಕರ್ ಚಾಲಕ ಓಂ ಪ್ರಕಾಶ್ ಮತ್ತು ಮಾಲೀಕ ಸುಖದೇವ್ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.