ಬೆಂಗಳೂರು: ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡ ಪ್ರತಿಷ್ಠಿತ ಬೆಂಗಳೂರಿನ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ನ ಶ್ರೀ ರಾಘವೇಂದ್ರ ಸುಂಟ್ರಹಳ್ಳಿ ಹಾಗೂ ಶ್ರೀ ಲಕ್ಷ್ಮೀ ಗ್ರೂಪ್ ಆಫ್ ಆಸ್ಪತ್ರೆಗಳು ಹಾಗೂ ಇನ್ನಿತರ ವೈದ್ಯಕೀಯ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರಗಳಲ್ಲಿನ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ನ. 24 ರಂದು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ10 ಗಂಟೆಗೆ ಆರೋಗ್ಯ ಜ್ಯೋತಿ ಅವಾರ್ಡ್ಸ್ ಕರ್ನಾಟಕ -2024 ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಪ್ರಶಸ್ತಿ ಪ್ರಧಾನವೂ ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿ 30ಕ್ಕೂ ಹೆಚ್ಚು ವಿಭಾಗದ ಸಿಬ್ಬಂದಿ ವರ್ಗಗಳ ವಿನೂತನ ಕಾರ್ಯಕ್ರಮ ಜರುಗಿದ್ದು, ಇದರಲ್ಲಿ ವಿಶೇಷವಾಗಿ ಆಯಮ್ಮಂದಿರು, ವಾರ್ಡ್ ಬಾಯ್, ಸೇರಿದಂತೆ ನರ್ಸಿಂಗ್, ಪ್ಯಾರಮೆಡಿಕಲ್ ಸಪೋರ್ಟಿಂಗ್ ಸ್ಟಾಪ್ , ಟೆಕ್ನಿಕಲ್ ಸ್ಟಾಫ್ ಹಾಗೂ ವೈದ್ಯರು ಸೇರಿದಂತೆ ಎಲ್ಲಾ ವಿಭಾಗಗಳನ್ನು ಗುರುತಿಸುವ ಬಹುದೊಡ್ಡ ಕಾರ್ಯಕ್ರಮ ನಡೆಸಲಾಯಿತು.
ರಾಘವೇಂದ್ರ ಸುಂಟ್ರಹಳ್ಳಿ, ಚಂದ್ರಗುತಿ ಹೋಬಳಿ,ಸೊರಬ ತಾಲೂಕು, ಶಿವಮೊಗ್ಗ ಜಿಲ್ಲಾ, ಒಬ್ಬ ಹಳ್ಳಿ ಹುಡುಗ ಬೆಂಗಳೂರು ಆಸ್ಪತ್ರೆಯಲ್ಲಿ ಉದ್ಯೋಗ ಮಾಡಿಕೊಂಡು,ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು,ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿಯಾಗಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಉಚಿತ ಶಿಬಿರಗಳನ್ನು ಮಾಡುವುದರೊಂದಿಗೆ,
ರೋಗಿಗಳಿಗೆ ಸಹಕಾರದೃಷ್ಟಿಯಲ್ಲಿ ತೋರಿಸಿಕೊಂಡು ಅದೇ ರೀತಿ ಸುಮಾರು ವರ್ಷಗಳಿಂದ ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗಾಗಿ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಮುಖೇನ ಆರೋಗ್ಯ ಜ್ಯೋತಿ ಅವಾರ್ಡ್ 2024 ಎಂಬ ಶೀರ್ಷಿಕೆಯಲ್ಲಿ ನ. 24 ಭಾನುವಾರ ಬೆಳಗ್ಗೆ 10 ಗಂಟೆಯಿಂದ ಗಾಂಧಿ ಭವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅವಾರ್ಡ್ ಗಳನ್ನ ಆನ್ಲೈನ್ ಅಪ್ಲಿಕೇಶನ್ ಮುಖಾಂತರ ಗುರುತಿಸಿ ಗೌರವಿಸಲಾಯಿತು.
ರೈತರಿಗೆ ಭರ್ಜರಿ ಗುಡ್ ನ್ಯೂಸ್: ಕುರಿ ಸಾಕಾಣಿಕೆ ಮಾಡುವವರಿಗೆ 1.75 ಲಕ್ಷ ಸಬ್ಸಿಡಿ ನೀಡಲಿದೆ ಸರ್ಕಾರ!
ಈ ಮಹತ್ಕಾರ್ಯವು ಪೂಜ್ಯ ಗುರುಗಳಾದ ಯೋಗೇಂದ್ರ ಶ್ರೀಗಳು,ಸಾಗರ ದ ಮಾನ್ಯ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು, ಮಾನ್ಯರಿಗೆ ಸಚಿವರಾದ ದಿನೇಶ್ ಗುಂಡೂರಾವ್ ರವರು, ಶ್ರೀಮತಿ ಪ್ರಿಯಾಂಕ ಉಪೇಂದ್ರರವರು, ಕುಮಾರಿ ಕಾರುಣ್ಯ ರಾಮ್ , ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಆಸ್ಪತ್ರೆಯ ಮಾಲೀಕರಾದ ಡಾ. ಸಾಂಬಶಿವ ರವರು,ಡಿ ಜಯಮಾಲಾ ರವರು, ಇನ್ನು ಹಲವು ಗಣ್ಯ ವ್ಯಕ್ತಿಗಳ ಸ್ವಾಭಾವಿತ್ವದಲ್ಲಿ ಅತ್ಯಂತ ಯಶಸ್ವಿನಿಂದ ಕಾರ್ಯಕ್ರಮ ಜರುಗಿತು.