ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ ಇತ್ತೀಚಿನ ಪ್ರವಾಹದಿಂದ ಕಡಿತಗೊಂಡ ಗ್ಯಾಂಗ್ಟಾಕ್ನ ಡಿಕ್ಚು-ಸಂಕ್ಲಾಂಗ್ ನಡುವೆ 70 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ 72 ಗಂಟೆಗಳ ಒಳಗೆ ನಿರ್ಮಿಸಿದೆ. ಪ್ರವಾಹದಿಂದಾಗಿ ಕಡಿತಗೊಂಡಿದ್ದ ಸಂಪರ್ಕವನ್ನು ಪುನಃಸ್ಥಾಪಿಸಲು ತ್ರಿಶಕ್ತಿ ಕಾರ್ಪ್ಸ್ನ ಸೇನಾ ಇಂಜಿನಿಯರ್ಗಳು ಜೂ.23 ರಂದು ಸೇತುವೆ ನಿರ್ಮಾಣದ ಕಾರ್ಯವನ್ನು ಆರಂಭಿಸಿದ್ದರು.
https://x.com/ANI/status/1806272022881947651?ref_src=twsrc%5Etfw%7Ctwcamp%5Etweetembed%7Ctwterm%5E1806272022881947651%7Ctwgr%5E3058eef44f81df561826ce5dca63eb6324803aed%7Ctwcon%5Es1_&ref_url=https%3A%2F%2Fpublictv.in%2Farmy-builds-70-foot-bailey-bridge-in-flood-hit-sikkim-in-72-hours%2F
ಈ ಕಾರ್ಯ ಕೇವಲ 72 ಗಂಟೆಗಳಲ್ಲಿ ಸೇನೆ ಪೂರ್ಣಗೊಳಿಸಿದೆ. ಸೇನೆಯಿಂದ ನಿರ್ಮಾಣವಾದ ಈ ಸೇತುವೆಯ ಮೇಲೆ ಸವಾಲಿನ ಹವಾಮಾನ ಪರಿಸ್ಥಿತಿಗಳಲ್ಲಿಯೂ ದಿಕ್ಚುದಿಂದ ಸಂಕ್ಲಾಂಗ್ ಹಾಗೂ ಚುಂಗ್ತಾಂಗ್ಗೆ ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಈ ಮೂಲಕ ತರ್ತು ಸಂದರ್ಭ ಹಾಗೂ ವೈದ್ಯಕೀಯ ಸಹಾಯವನ್ನು ಒದಗಿಸಲು ಸಹಕಾರಿಯಾಗಿದೆ.
ʼʼಚೆಂಡು ಹೂʼʼ ಪೂಜೆಗಷ್ಟೇ ಅಲ್ಲ, ನಿಮ್ಮ ಮುಖದ ಸೌಂದರ್ಯಕ್ಕೂ ಉಪಯೋಗ..! ಹೇಗೆ ಗೊತ್ತಾ..?
ಸೇತುವೆ ನಿರ್ಮಾಣಗೊಂಡ ಸ್ಥಳಕ್ಕೆ ರಾಜ್ಯ ಅರಣ್ಯ ಸಚಿವ ಮತ್ತು ವಿಪತ್ತು ನಿರ್ವಹಣೆಯ ರಾಜ್ಯ ಕಾರ್ಯದರ್ಶಿ ಪಿಂಟ್ಸೊ ನಾಮ್ಗ್ಯಾಲ್ ಲೆಪ್ಚಾ ಭೇಟಿ ನೀಡಿ, ಸೇತುವೆಯ ಪರಿಶೀಲನೆ ನಡೆಸಿದ್ದಾರೆ. ಬಳಿಕ ತ್ವರಿತ ಗತಿಯಲ್ಲಿ ಸೇತುವೆ ಪೂರ್ಣಗೊಳಿ ಸುವಲ್ಲಿ ಯಶಸ್ವಿಯಾದ ಸೇನೆಯ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಜೂ.11 ರಿಂದ ಸುರಿದ ನಿರಂತರ ಮಳೆಯು ಉತ್ತರ ಸಿಕ್ಕಿಂನಲ್ಲಿ ತೀವ್ರ ಹಾನಿ ಉಂಟುಮಾಡಿದೆ. ಹಲವೆಡೆ ಸೇತುವೆ ಕುಸಿತ, ಭೂಕುಸಿತ ಸಂಭವಿಸಿ ಸಂಪರ್ಕ ಕಡಿತಗೊಂಡಿವೆ.