ಕಲಬುರಗಿ: ಮದುವೆ ವಿಚಾರಕ್ಕೆ ಕಲಹ ಉಂಟಾದ ಹಿನ್ನಲೆ ಬಾವಿಯಲ್ಲಿ ಬಿದ್ದು ಅಣ್ಣ ತಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಅಣ್ಣ
ಸಂದೀಪ್ ತಂಗಿ ನಂದಿನಿ ಸಾವಿಗೆ ಶರಣಾದ ದುರ್ದೈವಿಗಳು ಎನ್ನಲಾಗಿದೆ. ಮದುವೆ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ನಂದಿನಿ ಬಳಿಕ ಮನೆಯಿಂದ ಹೊರಹೋಗಿ ಬಾವಿಗೆ ಹಾರಿದ್ದಾಳೆ.
ಕೂಡಲೇ ನಂದಿನಿಯ ಹಿಂದೇನೆ ತೆರಳಿದ ಅಣ್ಣ ಸಂದೀಪ್ ತಂಗಿ ಬಾವಿಗೆ ಹಾರಿರೋದನ್ನ ಕಂಡು ತಾನೂ ಬಾವಿಗೆ ಹಾರಿದ್ದಾನೆ. ಈಜು ಬಾರದ ಪರಿಣಾಮ ಅಣ್ಣ ತಂಗಿಯಿಬ್ಬರು ಬಾವಿಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ..