ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲೂಕಿನ ಕೋರ್ಟ್ ರಸ್ತೆಯಲ್ಲಿ ಪಾರ್ಕಿಂಗ್ ವಿಚಾರಕ್ಕೆ ಹಿರಿಯ ವ್ಯಕ್ತಿಗಳಾದ ಗುಣಶೇಖರ್ ಹಾಗೂ ಸದಾಶಿವ ಪೈ ನಡುವೆ ಜಗಳವಾಗಿದ್ದು, ಇದು ತಾರಕಕ್ಕೇರಿ ಸದಾಶಿವ ಪೈಯವರ ಕೈಗೆ ಗುಣಶೇಖರ್ ಚಾಕು ಇರಿದಿದ್ದಾರೆ.
ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಲಾಟೆ ಬಳಿಕ ಗುಣಶೇಖರ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.