ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಸಹ ಆಡಳಿತ ಮಂಡಳಿ ಮತ್ತು ಭಕ್ತರ ನಡುವೆ ವಾಗ್ವಾದ ನಡೆದಿದೆ. ನಾಡಿನ ಹೆಸರಾಂತ ಸರ್ವ ಧರ್ಮಗಳ ಸಮನ್ವಯದ ಮಠವಾದ ಸದ್ಗುರು ಶ್ರೀ ಸಿದ್ದಾರೂಢಸ್ವಾಮಿ ಮಠ ಟ್ರಸ್ಟ್ ಕಮಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಗುರು ಎಂಬ ಸರ್ವೋಚ್ಛ ಮತ್ತು ಪರಮಪವಿತ್ರ ನಾಮದ ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ.
“ಜಗದ್ಗುರು” ಎಂಬುವ ಜಾತಿ ಸೂಚಿಕ ಮತ್ತು ಸಂಕುಚಿತ ಪದಬಳಕೆ ಸಲ್ಲದು, ಮಠದಲ್ಲಿ ಸರಿಯಾದ ಕಾರ್ಯ ನಡೆಯುತ್ತಾ ಇಲ್ಲ, ಬೇಕಾಬಿಟ್ಟಿಯಾಗಿ ಆಡಳಿತ ಮಂಡಳಿ ನಡೆದುಕೊಳ್ಳತಾ ಇದೆ ಎಂಬ ಆರೋಪ ಕೇಳಿ ಬಂದಿದೆ. ಭಕ್ತರ ಪರವಾಗಿ ಹೋರಾಟಗಾರ ಗುರುನಾಥ ಉಳ್ಳಿಕಾಶಿ, ವೈದ್ಯ ಸೇರಿದಂತೆ ಹಲವರ ಆರೋಪ ವ್ಯಕ್ತಪಡಿಸಿದ್ದಾರೆ.
ಇನ್ನು ರಾಷ್ಟ್ರಮಟ್ಟದಲ್ಲಿ ಭಕ್ತವೃಂದವನ್ನು ಹೊಂದಿರುವಂತಹ ಜಾತಿ, ಧರ್ಮವನ್ನು ಮೀರಿ ಧಾರ್ಮಿಕ ಕಾರ್ಯ ನಡೆಯುತ್ತಾ ಇದೆ. ನೇರ ಉಭಯ ಶ್ರೀಗಳ ಗದ್ದುಗೆ ಸ್ಪರ್ಶ ದರ್ಶನ ನೀಡುವ ಏಕೈಕ ಮಠ ಎಂಬುವ ಖ್ಯಾತಿ ಪಡೆದಿರುವ ಮಠ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಮಠ ಕೇವಲ, ಜಾತಿ ಧರ್ಮ, ಮತ ಪಂಥಕ್ಕೆ ಸೀಮಿತವಾಗಿಲ್ಲ. ಶ್ರೀ ಸಿದ್ಧಾರೂಢರ ಕಾಲದಿಂದಲೂ ಶ್ರೀ ಸಿದ್ದಾರೂಢರನ್ನು “ಸದ್ಗುರು” ಎಂದು ಅನೇಕ ಲಿಖಿತ ದಾಖಲೆಗಳಲ್ಲಿ ಇರುವುದನ್ನು ನಾವು ಇಂದಿಗೂ ಕಾಣುತ್ತಿದ್ದೇವೆ.
ಆದರೆ 2025ನೇ ಸಾಲಿನ ಶಿವರಾತ್ರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಬ್ಯಾನರ್ಗಳಲ್ಲಿ ಮತ್ತು ಬೋರ್ಡಗಳಲ್ಲಿ “ಸದ್ಗುರು” ನಾಮದ ಬದಲಾಗಿ “ಜಗದ್ಗುರು” ಶ್ರೀ ಸಿದ್ಧಾರೂಢ ಸ್ವಾಮೀಗಳು ಮುದ್ರಣ ಮಾಡಲಾಗಿದೆ. ಸ್ವಾಮೀಗಳು ಅಂತ ಜಾತಿ ಸೂಚಿಕ ಮತ್ತೆ ಸಂಕುಚಿತ ಪದವನ್ನು ಬಳಕೆ ಸರಿಯಲ್ಲ ಎಂದು ಆಡಳಿತ ಮಂಡಳಿಗೆ ಮನವಿ ಮಾಡಿ ಜಗದ್ಗುರು ನಾಮಪದ ತೆಗೆದು ಹಾಕಲು “ಸದ್ಗುರು” ಶ್ರೀ ಸಿದ್ಧಾರೂಢ ಸ್ವಾಮಿ ಭಕ್ತರು ಸೇವಕ ವೃಂದದಿಂದ ಸಹ ಮನವಿ ಮಾಡಲಾಗಿದೆ.