ಇಂದಿನ ಯಾವುದೇ ಮಕ್ಕಳನ್ನು ನೋಡಿ ಹೆಚ್ಚಿನ ಸಮಯ ಮೊಬೈಲ್ ನಲ್ಲಿಯೇ ಮುಳುಗಿರುತ್ತಾರೆ. ಯೂಟ್ಯೂಬ್ ವಿಡಿಯೋಸ್, ರೀಲ್ಸ್, ಗೇಮ್ಸ್ ಹೀಗೆ ಹೆಚ್ಚಿನ ಸಮಯ ಮೊಬೈಲ್ ನಲ್ಲಿಯೇ ಕಳೆಯುತ್ತಾರೆ. ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀಳಲಿದೆ.
ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನರಂಜನೆಗಾಗಿ ಫೋನ್ಗಳನ್ನು ಹೆಚ್ಚು ಬಳಸ್ತಾರೆ. ಆರೋಗ್ಯ ವರದಿಯ ಪ್ರಕಾರ.. ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿದ್ದು, ಇದು ಮಕ್ಕಳ ನಿದ್ರೆಯ ಮೇಲೆ, ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ರೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮೊಬೈಲ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳಿಗೆ ಅಪಾಯಕಾರಿಯಾಗಿದ್ದು ಇದರಿಂದ ದೃಷ್ಟಿ ದೋಷ ಉಂಟಾಗುತ್ತಿದೆ. ಜೊತೆಗೆ ನಿದ್ರೆಯ ಮೇಲೆ ಪರಿಣಾಮ ಬೀರುವ ಮೆಲಟೋನಿನ್ ಹಾರ್ಮೋನ್ ಉತ್ಪಾದನೆ ಕಮ್ಮಿ ಆಗುತ್ತದೆ. ಕಡಿಮೆ ನಿದ್ರೆ ದೈನಂದಿನ ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಫೋನ್ನ ಅತಿಯಾದ ಬಳಕೆಯಿಂದಾಗಿ ಮಕ್ಕಳು ದೈಹಿಕ ಚಟುವಟಿಕೆ ಮಾಡುವುದಿಲ್ಲ. ಇದು ಅವರ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಮಕ್ಕಿಳಿಗೆ ಫೋನ್ ಕೊಡುವ ಬದಲು ಹೊರಾಂಗಣ ಆಟಗಳನ್ನು ಆಡಲು ಪ್ರೇರೇಪಿಸಿ. ಹೀಗೆ ಮಾಡುವುದರಿಂದ ಫೋನ್ ಬಳಕೆಯಿಂದ ಗಮನ ಬೇರೆಡೆಗೆ ತಿರುಗಿಸಲಾಗುತ್ತದೆ ಮಕ್ಕಳೊಂದಿಗೆ ಸಂವಹನ ನಡೆಸಿ ಮತ್ತು ಅವರಿಗೆ ಕಥೆಗಳನ್ನು ಹೇಳಿ. ಮಕ್ಕಳಿಗೆ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಮಾಡಿಸಿ. ಇತರ ಚಟುವಟಿಕೆಗಳಲ್ಲಿ ಅವರನ್ನು ಹೆಚ್ಚು ಹೆಚ್ಚು ತೊಡಗುವಂತೆ ನೋಡಿಕೊಳ್ಳಿ.