ಮೊದಲೆಲ್ಲಾ ಈ ಚಿಕ್ಕ ಮಕ್ಕಳಿಗೆ ರಾತ್ರಿ ಚಂದಮಾಮನನ್ನು ತೋರಿಸುತ್ತಾ ಮತ್ತು ಬೆಳಿಗ್ಗೆ ಆಟ ಆಡಿಸುತ್ತಾ ನಿಧಾನವಾಗಿ ತಾಯಂದಿರು ಅವರ ಹಿಂದೆ ಮುಂದೆ ಓಡಾಡುತ್ತಾ ಊಟ ಮಾಡಿಸುತ್ತಿದ್ದರು. ಆದರೆ ಈಗ ಚಿಕ್ಕ ಮಕ್ಕಳು ಊಟ ಮಾಡಲು ಹಠ ಮಾಡುತ್ತಿವೆ ಎಂದರೆ ಕೈಗೆ ಮೊಬೈಲ್ ಫೋನ್ ಕೊಟ್ಟು ಅದರಲ್ಲಿ ಚಿಣ್ಣರ ಹಾಡುಗಳನ್ನು ಹಾಕಿಕೊಟ್ಟು ತೋರಿಸುತ್ತಾ ಪೋಷಕರು ಊಟ ಮಾಡಿಸುವ ಹಾಗೆ ಆಗಿದೆ.
ಮಕ್ಕಳು ಸ್ವಲ್ಪ ಫ್ರೀ ಟೈಮ್ ಸಿಕ್ಕರೂ ಸಾಕು, ಮೊಬೈಲ್ ನೋಡುತ್ತಾ ಗಂಟೆಗಟ್ಟಲೆ ಕಳೆಯುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸ್ಮಾರ್ಟ್ಫೋನ್ ಚಟ ಮಕ್ಕಳ ಆರೋಗ್ಯ, ಸಾಮಾಜಿಕ ಸಂಬಂಧಗಳು, ಶಾಲಾ ಕಾರ್ಯಕ್ಷಮತೆ, ವಿದ್ಯಾಭ್ಯಾಸ ಮತ್ತು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳು ಮೊಬೈಲ್ನಿಂದ ದೂರ ಉಳಿಯಬೇಕಿದ್ರೆ ಕೆಲವು ಪರಿಹಾರಗಳಿವೆ. ಮಕ್ಕಳ ಕೋಣೆಯಲ್ಲಿ 11 ನವಿಲು ಗರಿಗಳನ್ನು ತಲೆಕೆಳಗಾಗಿ ನೇತು ಹಾಕುವುದರಿಂದ ಮಕ್ಕಳು ಮೊಬೈಲ್ ವ್ಯಸನದಿಂದ ಹೊರಬರಲು ಸಹಾಯವಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ
ಮೊಬೈಲ್ ಫೋನ್ ಚಟವನ್ನು ಕೊನೆಗೊಳಿಸಲು ಪರಿಹಾರಗಳು
ನಿಮ್ಮ ಮಗುವಿಗೆ ಮೊಬೈಲ್ ಫೋನ್ನ ಹೆಚ್ಚಿನ ಚಟವಿದ್ದರೆ, ಅವರ ಹಾಸಿಗೆಯ ಬಳಿ ನೀರು ತುಂಬಿದ ಉಕ್ಕಿನ ಪಾತ್ರೆಯನ್ನು ಇರಿಸಿ.
ಪ್ರತಿದಿನ ಬೆಳಿಗ್ಗೆ ಈ ನೀರನ್ನು ಅರಳಿ ಮರ ಅಥವಾ ಯಾವುದೇ ಮರ ಇಲ್ಲ ಸಸ್ಯದ ಮೇಲೆ ಸುರಿಯಿರಿ.
ಈ ಪರಿಹಾರವು ಚಂದ್ರನನ್ನು ಬಲಪಡಿಸುತ್ತದೆ, ಇದು ಮಗುವಿನ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಇದರೊಂದಿಗೆ, ಮಂಗಳವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಅವನ ಪಾದಗಳಿಗೆ ಬೆಲ್ಲ ಮತ್ತು ಬೇಳೆಯನ್ನು ಅರ್ಪಿಸಿ.
ಪೋಷಕರಲ್ಲಿ ಒಬ್ಬರು ಅಪ್ಪ ಅಥವಾ ಅಮ್ಮ ಈ ಪರಿಹಾರವನ್ನು ಪೂರ್ಣ ನಂಬಿಕೆ ಮತ್ತು ಶ್ರದ್ಧೆಯಿಂದ ಮಾಡಬೇಕು.
ಚಂದ್ರನನ್ನು ಸಮತೋಲನಗೊಳಿಸಿ: ಚಂದ್ರ ದುರ್ಬಲವಾಗಿದ್ದರೆ ಮೊಬೈಲ್ ಚಟ ಹೆಚ್ಚಾಗುತ್ತದೆ. ಒಂದು ಚೌಕಾಕಾರದ ಬೆಳ್ಳಿಯ ತುಂಡನ್ನು ತೆಗೆದುಕೊಂಡು ಅದಕ್ಕೆ ಕೆಂಪು ಬಣ್ಣ ಬಳಿದು ಮಗುವಿನ ಮೊಬೈಲ್ ಕವರ್ನಲ್ಲಿ ಇರಿಸಿ.
ಹನುಮಾನ್ ಚಾಲೀಸಾ ಸಂಕಲ್ಪ: ಪೋಷಕರಲ್ಲಿ ಒಬ್ಬರು ಸಂಕಲ್ಪ ಮಾಡಿ 108 ಬಾರಿ ಹನುಮಾನ್ ಚಾಲೀಸಾ ಪಠಿಸಬೇಕು. ಪ್ರತಿದಿನ ಒಂದು ಬಟ್ಟಲಿನಲ್ಲಿ ಒಂದು ಗ್ರಾಂ ಕೆಂಪು ಮುತ್ತನ್ನು ಅಥವಾ ಹವಳ ಹಾಕಿ ಮತ್ತು 108 ನೇ ದಿನ ಈ ಮುತ್ತನ್ನು ಮಗುವಿನ ಕೈಯಿಗೆ ಕಟ್ಟಬೇಕು. ಇದು ಮಗುವಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಮಗುವಿನ ಕೋಣೆಯಲ್ಲಿ 11 ನವಿಲು ಗರಿಗಳನ್ನು ತಲೆಕೆಳಗಾಗಿ ನೇತು ಹಾಕಿ. ಈ ಪರಿಹಾರವು ಮಗುವನ್ನು ಗೊಂದಲಗಳಿಂದ ದೂರವಿಡುತ್ತದೆ. ಇದು ಮಗುವಿಗೆ ಉಪಯುಕ್ತವಲ್ಲದ ವಿಷಯಗಳ ಬಗ್ಗೆ ಗಮನವಹಿಸುವ ಬದಲು ಅಧ್ಯಯನ ಮತ್ತು ಜವಾಬ್ದಾರಿಗಳ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ.