ಸೀರೆ ಕೂಡಾ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ ಸುದ್ದಿ ಇದೀಗ ಸಖತ್ ಸೌಂಡ್ ಮಾಡ್ತಿದೆ.
ಮಹಿಳೆ ಒಂದೇ ಉಡುಪನ್ನು ದೀರ್ಘಕಾಲದವರೆಗೆ ಧರಿಸಿದರೆ, ಅದು ಸೊಂಟದ ಮೇಲೆ ಉಜ್ಜಲು ಪ್ರಾರಂಭಿಸುತ್ತದೆ, ಅಲ್ಲಿ ಚರ್ಮವು ಸಿಪ್ಪೆ ಸುಲಿದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಪುನರಾವರ್ತಿತವಾಗುತ್ತಾ ನಿಧಾನವಾಗಿ ಕ್ಯಾನ್ಸರ್ ಪ್ರಾರಂಭವಾಗಬಹುದು.
ಸೀರೆ ಕ್ಯಾನ್ಸರ್ ಗೆ ಉಡುಗೆಗಿಂತ ಸ್ವಚ್ಛತೆಯೇ ಹೆಚ್ಚು ಕಾರಣ. ಹೆಚ್ಚಿನ ಶಾಖ ಮತ್ತು ಆರ್ದ್ರತೆ ಇರುವ ಪ್ರದೇಶಗಳಲ್ಲಿ, ಈ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಬಿಹಾರ ಮತ್ತು ಜಾರ್ಖಂಡ್ನಲ್ಲಿ ಇದರ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗುತ್ತವೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಎಲ್ಲಾ ಕ್ಯಾನ್ಸರ್ಗಳಲ್ಲಿ ಸೀರೆ ಕ್ಯಾನ್ಸರ್ ಶೇಕಡಾ 1 ರಷ್ಟಿದೆ. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC) ಎಂದು ಕರೆಯಲಾಗುತ್ತದೆ.
ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆಯಲ್ಲೂ ಈ ಬಗ್ಗೆ ಸಂಶೋಧನೆ ನಡೆದಿದೆ. ಈ ಸಂಶೋಧನೆಯಲ್ಲಿ ಧೋತಿ ಕೂಡ ಸೇರಿದೆ. 68 ವರ್ಷದ ಮಹಿಳೆಯೊಬ್ಬರಿಗೆ ಸೀರೆ ಕ್ಯಾನ್ಸರ್ ಇರುವುದು ಪತ್ತೆಯಾದ ಬಾಂಬೆ ಆಸ್ಪತ್ರೆಯ ವೈದ್ಯರು ಸೀರೆ ಕ್ಯಾನ್ಸರ್ ಎಂಬ ಹೆಸರನ್ನು ನೀಡಿದ್ದಾರೆ.
ಇನ್ನು ಮುಖ್ಯವಾಗಿ ತುಂಬಾ ಬಿಗಿಯಾದ ಫಿಟ್ ಜೀನ್ಸ್ ಪುರುಷರಲ್ಲಿ ಕ್ಯಾನ್ಸರ್ಗೆ ಕಾರಣವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ತುಂಬಾ ಬಿಗಿಯಾದ ಬಟ್ಟೆಗಳನ್ನು ಗಂಟೆಗಳ ಕಾಲ ಧರಿಸಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ.
ಆ ಪ್ರದೇಶದಲ್ಲಿ ಆಮ್ಲಜನಕದ ಹರಿವಿಗೆ ತೊಂದರೆಯಾಗಬಹುದು. ಸಂಶೋಧನೆಯ ಪ್ರಕಾರ, ಜೀನ್ಸ್ ಪುರುಷರಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ತಾಪಮಾನವನ್ನು ಹೆಚ್ಚಿಸುತ್ತದೆ, ಇದು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ವೃಷಣ ಕ್ಯಾನ್ಸರ್ (ಅಂಡಾಶಯದ ಕ್ಯಾನ್ಸರ್) ಗೆ ಕಾರಣವಾಗಬಹುದು.
ಸೀರೆ ಕ್ಯಾನ್ಸರ್ ಇತಿಹಾಸ ನೋಡುವುದಾದರೇ, 1945ರಲ್ಲಿ ವೈದ್ಯರಾದ ಖಾನೋಲ್ಕರ್ ಮತ್ತು ಸೂರ್ಯಾಬಾಯಿ ಅವರು ಹೈಪೋಪಿಗ್ಮೆಂಟೆಡ್ ಮತ್ತು ದಪ್ಪನೆಯ ಗುರುತಗಳುಳ್ಳ ಹೊಸ ರೀತಿಯ ಚರ್ಮದ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತಾರೆ. ಅದು ಮಾರಣಾಂತಿಕ ಎಂಬುದನ್ನು ಗುರುತಿಸುವ ಅವರು ಅದಕ್ಕೆ ಧೋತಿ ಕ್ಯಾನ್ಸರ್ ಎಂದು ಹೆಸರು ನೀಡುತ್ತಾರೆ
ಸೀರೆ ಕ್ಯಾನ್ಸರ್ನ ಪ್ರಮುಖ ಲಕ್ಷಣಗಳೆಂದರೆ, ಸೊಂಟದ ಸುತ್ತಲೂ ತುರಿಕೆ ಮತ್ತು ಬಣ್ಣದ ಬದಲಾಗುವುದರೊಂದಿಗೆ ನಿರಂತರ ಕಿರಿಕಿರಿ ಇರುತ್ತದೆ. ಹಲವು ವರ್ಷಗಳ ಕಾಲ ಇದು ಹೀಗೆ ಇರಬಹುದು. ಈ ಸಮಸ್ಯೆ ಕಾಣಿಸಿದ ವ್ಯಕ್ತಿಯ ಸೊಂಟದ ಬಳಿ ವಾಸಿಯಾಗದ ಗಾಯಗಳು ಆಗಬಹುದು. ಹೈಪರ್- ಅಥವಾ ಹೈಪೋಪಿಗ್ಮೆಂಟೆಡ್ ಪ್ಯಾಚ್ ಉಂಟಾಗಬಹುದು. ಆ ಗಾಯದಿಂದ ಕೆಟ್ಟ ವಾಸನೆ ಬರಬಹುದು. ಹೀಗೆ ಇದು ಕ್ಯಾನ್ಸರ್ ರೂಪ ತಾಳುತ್ತದೆ.